ಕಾಸರಗೋಡು: ಭಾರತದ ನೆಚ್ಚಿನ ಪ್ರಧಾನಿ, ವಿಶ್ವ ನಾಯಕ ನರೇಂದ್ರ ಮೋದಿ ಅವರ 76 ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಕಾಸರಗೋಡಿನ ನಮೋ ಫ್ಯಾನ್ಸ್ ವತಿಯಿಂದ ಮಲ್ಲಿಕಾರ್ಜುನ ವತಿಯಿಂದ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕ್ಷೇತ್ರ ಮುಖ್ಯ ಅರ್ಚಕ ಶಿವಶಂಕರ ಅಡಿಗ ಅವರ ಪೂರೋಹಿತ್ಯದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಜರಗಿತು. ಈ ಸಂದರ್ಭ ನಗರಸಭಾ ಸದಸ್ಯ ಕೆ.ಎನ್.ರಾಮಕೃಷ್ಣ ಹೊಳ್ಳ, ನಮೋ ಫ್ಯಾನ್ಸಿನ ಪ್ರಮುಖರಾದ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ, ಕಿಶೋರ್ ಕುಮಾರ್ ಎಸ್.ವಿ.ಟಿ, ಶಂಕರನಾರಾಯಣ ಹೊಳ್ಳ, ಪುರಂದರ ಶೆಟ್ಟಿ, ಪ್ರಮೋದ ಎಸ್.ವಿ.ಟಿ, ನಾಮದೇವ ಪೈ, ನವೀನ ಅಶೋಕ ನಗರ, ಶೇಷಾದ್ರಿ ಹೊಳ್ಳ, ರವಿ ಕೇಸರಿ ಮಾತೃ ಸಮಿತಿಯ ಸದಸ್ಯರು ಮಕ್ಕಳು ಪಾಲ್ಗೊಂಡಿದ್ದರು.


