HEALTH TIPS

ಚೇವಾರಿನ ನಿಸರ್ಗಧಾಮದಲ್ಲಿಹೊಸ ಚಿಗುರು ಹಳೆ ಬೇರು ಸಂಗಮಿಸಿದ ಶ್ರಾವಣ ಚಿಣ್ಣರ ಲೋಕ-ಸಾಹಿತ್ಯ ಸಂವಹನ ಕಾರ್ಯಕ್ರಮ

ಉಪ್ಪಳ:  ಸವಿ ಹೃದಯದ ಕವಿಮಿತ್ರರು ವೇದಿಕೆ, ಪೆರ್ಲ ಹಾಗೂ ಶಂಪಾ ಪ್ರತಿಷ್ಠಾನ ಬೆಂಗಳೂರು ಇವರ ಸಹಯೋಗದಲ್ಲಿ ಚೇವಾರಿನ ನಿಸರ್ಗಧಾಮದಲ್ಲಿ ನಡೆದ 'ಶ್ರಾವಣ ಚಿಣ್ಣರ ಲೋಕ-ಸಾಹಿತ್ಯ ಸಂವಹನ ಹಾಗೂ ಪ್ರದರ್ಶನ' ಕಾರ್ಯಕ್ರಮ ಹೊಸ ಚಿಗುರು ಹಳೆ ಬೇರು ಸಂಗಮಕ್ಕೆ ಸಾಕ್ಷಿಯಾಯಿತು.


ಕಾರ್ಯಕ್ರಮವನ್ನು ಕುಮಾರಿ ದೀಕ್ಷಾ ಕೆಜಕ್ಕಾರು ಉದ್ಘಾಟಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸೋಮಣ್ಣ ಬೇವಿನಮರದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಅವರ ಸೃಜನಶೀಲತೆಗೆ ಪ್ರೋತ್ಸಾಹ ನೀಡುತ್ತಿರುವುದಲ್ಲದೆ ಸಾಹಿತ್ಯ, ಕಲೆ ಹಾಗೂ ಸಂಸ್ಕøತಿಯೊಂದಿಗೆ ಮಕ್ಕಳನ್ನು ಬೆಳೆಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು  ಹೇಳಿದರು.

'ಚಿಣ್ಣರ ಪ್ರತಿಭೆಯನ್ನು ಕೇವಲ ಶಾಲಾ ಪಠ್ಯಕ್ಕೆ ಸೀಮಿತಗೊಳಿಸದೆ, ಸಾಹಿತ್ಯ, ಕಲೆ, ಚಿತ್ರಕಲೆ, ಭಾಷೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ನೀಡಬೇಕು. ಮಕ್ಕಳ ಪ್ರತಿಭೆಗೆ ದೊರೆಯುವ ಬೆಂಬಲವೇ ಅವರ ಭವಿಷ್ಯದ ಸಾಧನೆಗೆ ಭದ್ರ ಬುನಾದಿಯಾಗುತ್ತದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದರ ಜೊತೆಗೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಅಭಿಮಾನವನ್ನೂ ಹೆಚ್ಚಿಸುತ್ತವೆ' ಎಂದು ಅವರು ಹೇಳಿದರು.


ಶಂಪಾ ಪ್ರತಿಷ್ಠಾನ, ಬೆಂಗಳೂರಿನ ಸ್ಥಾಪಕಾಧ್ಯಕ್ಷೆ ಹಾಗೂ ವಿಶ್ರಾಂತ ಪ್ರಾಧ್ಯಾಪಕಿ ಡಾ. ಪ್ರಮೀಳಾ ಮಾಧವ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ  ಎ.ಆರ್. ಸುಬ್ಬಯ್ಯಕಟ್ಟೆ, ಶಿವರೆಡ್ಡಿ ಕೊಪ್ಪಳ, ಶಂಪಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಎನ್. ಮೂಡಿತ್ತಾಯ, ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಪತ್ರಕರ್ತ ಹಾಗೂ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಶಂಪಾ ಪ್ರತಿಷ್ಠಾನದ ಸಂಚಾಲಕಿ ಡಾ. ಯು.ಮಹೇಶ್ವರಿ, ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು, ಹರೀಶ್ ಪೆರ್ಲ, ಸವಿ ಹೃದಯದ ಕವಿಮಿತ್ರರು ವೇದಿಕೆ ಸಂಚಾಲಕ ಸುಭಾಷ್ ಪೆರ್ಲ, ಕತೆಗಾರ್ತಿ ಸ್ನೇಹಲತಾ ದಿವಾಕರ್, ನಿವೃತ್ತ ಮುಖ್ಯೋಪಾಧ್ಯಾಯ ವಿ.ಬಿ. ಕುಳಮರ್ವ, ಶಿವ ಪಡ್ರೆ, ಬಾಲ ಮಧುರ ಕಾನನ, ಚಿತ್ರ ಕಲಾವಿದ ಶಿಕ್ಷಕ ಜಯಪ್ರಕಾಶ್ ಶೆಟ್ಟಿ, ಸುಮಿತ್ರ ಎರ್ಪಕಟ್ಟೆ, ಚಂದ್ರಹಾಸ ಅರೆಕ್ಕಾಡಿ, ಬಾಲಕೃಷ್ಣ ನಾಯ್ಕ ಏಳ್ಕಾನ, ಜಾನ್ ಡಿ ಸೋಜ ಕಯ್ಯಾರ್, ಸಂಘಟಕಿ ಶಶಿಕಲಾ ಪಟೇಲ್ ಬಾಳೆಗುಳಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಗ್ರೀಷ್ಮಾ ಬಿ.ಬಳ್ಳ ಸ್ವಾಗತಿಸಿ, ಸಮೃದ್ಧಿ ಸಾಯ ವಂದಿಸಿದರು. ಹರ್ಷಿತಾ ಪೆರ್ಲ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳು, ಕವಿಗಳು, ಪತ್ರಕರ್ತರು, ಶಿಕ್ಷಕರು, ಚಿತ್ರಗಾರರು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ಚಿಣ್ಣರ ಪ್ರತಿಭೆಯನ್ನು ಪ್ರೋತ್ಸಾಹಿಸಿದರು. ಹಲವು ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries