ಕಾಸರಗೋಡು: ಶ್ರೀ ನಾರಾಯಣ ಧರ್ಮ ಪರಿಪಾಲನಂ(ಎಸ್ಎನ್ಡಿಪಿ)ಕಾಸರಗೋಡು ಯೂನಿಯನ್ ಆಶ್ರಯದಲ್ಲಿ ಶ್ರೀ ನಾರಾಯಣ ಗುರುಗಳ 99ನೇ ಸಮಾಧಿ ದಿನದ ಸ್ಮರಣಾರ್ಥ ಸೋಮವಾರ ಕಾರ್ಯಕ್ರಮ ಆಯೋಜಿಸಲಾಯಿತು.
ಸಂಘಟನೆ ಕಾಸರಗೋಡು ಯೂನಿಯನ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಂಘಟನೆಯ ನಿರ್ದೇಶಕ, ವಕೀಲ ಪಿ.ಕೆ. ವಿಜಯನ್ ಉದ್ಘಾಟಿಸಿದರು. ಎಸ್ ಎನ್ ಡಿಪಿ ಒಕ್ಕೂಟದ ಕಾರ್ಯದರ್ಶಿ ಗಣೇಶ ಪಾರೆಕಟ್ಟ, ಒಕ್ಕೂಟದ ಉಪಾಧ್ಯಕ್ಷ ಎ.ಟಿ. ವಿಜಯನ್, ಮೋಹನನ್ ಮೀಪುಗುರಿ, ನಾಗೇಶ್ ಕುಂಬಳೆ, ಕೃಷ್ಣನ್ ಪಾರೆಕಟ್ಟ, ವಿಜಯನ್ ಮನ್ನಿಪ್ಪಾಡಿ, ಮತ್ತು ಕೆ.ರಾಜೇಶ್ ಉಪಸ್ಥಿತರಿದ್ದರು. ಈ ಸಂದರ್ಭ ಸಾಮೂಹಿಕ ಪ್ರಾರ್ಥನೆ, ಪುಷ್ಪಾರ್ಚನೆ ನಡೆಯಿತು.

