ಮಧೂರು: ಕೇರಳ ಪ್ರಾಂತ್ಯ ಪೆನ್ಷನರ್ಸ್ ಸಂಘದ ಮಧೂರು ಹಾಗೂ ಮೊಗ್ರಾಲ್ ಪುತ್ತೂರು ಘಟಕಗಳ ಜಂಟಿ ಸಮ್ಮೇಳನ ಇತ್ತೀಚೆಗೆ ಕೂಡ್ಲು ರಾಮದಾಸ ನಗರದ ದೇಶಿಯ ಅಧ್ಯಾಪಕ ಭವನದಲ್ಲಿ ಜರಗಿತು. ಮಧೂರು ಘಟಕದ ಅಧ್ಯಕ್ಷ ಶಿವನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲಾಕ್ ಕಾರ್ಯದರ್ಶಿ ರಾಜೇಂದ್ರ ಕುಂಟಾರ್ ಉದ್ಘಾಟಿಸಿದರು. ಹಿರಿಯ ಸದಸ್ಯ, ಗೌರವಾಧ್ಯಕ್ಷ ವಿಷ್ಣು ಭಟ್, ಜಿಲ್ಲಾ ಉಪಾಧ್ಯಕ್ಷ ಕೇಶವ ಭಟ್ ಶುಭ ಹಾರೈಸಿದರು.
ಬಳಿಕ ಮಧೂರು ವಲಯ ಮತ್ತು ಮೊಗ್ರಾಲ್ ಪುತ್ತೂರು ವಲಯದ ಕಾರ್ಯದರ್ಶಿಗಳು ಅವರವರ ವಲಯದ 2025 -- 26ನೇ ವರ್ಷದ ವರದಿ ಮತ್ತು ಲೆಕ್ಕಪತ್ರ ಮಂಡಿಸಿ ಸಭೆಯಲ್ಲಿ ಅಂಗೀಕಾರ ಪಡೆದರು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಧೂರು ಘಟಕದ ಕಾರ್ಯದರ್ಶಿ ನೂತನಕುಮಾರಿ ಸ್ವಾಗತಿಸಿ, ಮೊಗ್ರಾಲ್ ಪುತ್ತೂರು ವಲಯ ಕಾರ್ಯದರ್ಶಿ ಸರೋಜಿನಿ ಟೀಚರ್ ವಂದಿಸಿದರು.
ಆಯ್ಕೆಯಾದ ಪದಾಧಿಕಾರಿಗಳು:
ಶಿವ ನಾಯ್ಕ್(ಅಧ್ಯಕ್ಷ). ಬಲರಾಮ್ ಭಟ್(ಉಪಾಧ್ಯಕ್ಷ), ನೂತನ ಕುಮಾರಿ(ಕಾರ್ಯದರ್ಶಿ), ವಂದನಾ ಟೀಚರ್(ಜೊತೆ ಕಾರ್ಯದರ್ಶಿ),ಕಾರ್ಯಕಾರಿ ಸಮಿತಿ ಸದಸ್ಯರು ಕೇಶವ ಭಟ್, ವಿಶ್ವನಾಥ ಭಟ್, ಲೀಲಾವತಿ ಟೀಚರ್, ಶಶಿಕಲಾ ಟೀಚರ್, ಪ್ರೇಮಲತಾ ಟೀಚರ್ ಮನ್ನಿಪಾಡಿ, ಮುತ್ತು ಕೃಷ್ಣನ್, ರೇಖಾ ಟೀಚರ್, ಕೃಷ್ಣ ನಡುವಂತಿಲ್ಲಾಯ, ಶಾಂತಕುಮಾರಿ, ಉಷಾ ಕುಮಾರಿ ಮಾಯಿಪ್ಪಾಡಿ, ಬಾಲಕೃಷ್ಣ ಉಳಿಯ, ರೇವತಿ ಟೀಚರ್, ಸುಲತಾ ಟೀಚರ್, ಗೌರವಾಧ್ಯಕ್ಷರು: ವಿಷ್ಣು ಭಟ್ ಕಕ್ಕೆಪ್ಪಾಡಿ, ನಾರಾಯಣಯ್ಯ.
ಮೊಗ್ರಾಲ್ ಪುತ್ತೂರು ವಲಯದ ಹೊಸ ಪದಾಧಿಕಾರಿಗಳು:
ಸರೋಜಿನಿ ಟೀಚರ್(ಅಧ್ಯಕ್ಷೆ), ಮನೋಹರ ಶೆಟ್ಟಿ, ರಾಘವ ಮಾಸ್ತರ್(ಉಪಾಧ್ಯಕ್ಷರು), ಶಶಿಧರ್ ಪಂಡಿತ್(ಕಾರ್ಯದರ್ಶಿ), ನಾರಾಯಣ, ಪ್ರಸನ್ನ(ಜತೆ ಕಾರ್ಯದರ್ಶಿ)

.jpg)
.jpg)
