HEALTH TIPS

ಶೇಣಿಯವರು ಯಕ್ಷಗಾನದ ದಂತಕಥೆ, ವಿಶ್ವಕೋಶ-ಎಡನೀರು ಶ್ರೀ

ಬದಿಯಡ್ಕ: ಕೂಡ್ಲು ಮೇಳವು ಜೋಡಾಟದಲ್ಲಿ ಮರೆದ ಮೇಳವಾಗಿತ್ತು. ಒಂದಷ್ಟು ಕಾಲ ಶೇಣಿ ಗೋಪಾಲಕೃಷ್ಣ ಭಟ್ಟರು ಮೇಳವನ್ನು ನಡೆಸಿದ್ದರು. ಮಾತಿನ ಲೋಕದ ಬೆರಗಾಗಿ ಹೊರಹೊಮ್ಮಿದ ಶೇಣಿಯವರು ನಡೆದಾಡುವ ಯಕ್ಷ ಕೋಶವಾಗಿದ್ದರು. ಅವರು ಮಾಡದ ಪಾತ್ರಗಳಿಲ್ಲ. ಗೊತ್ತಿಲ್ಲದ ವಿಚಾರಗಳಿಲ್ಲ. ಯಕ್ಷಗಾನ ತರಬೇತಿ ಕೇಂದ್ರವು ತನ್ನ ರಜತೋತ್ಸವದಲ್ಲಿ ಹಿರಿಯರನ್ನು ಸ್ಮರಿಸುವ ಪರಿಪಾಠ ಹಾಕಿರುವುದು ನಿಜಕ್ಕೂ ಮಾದರಿಯಾಗಿದೆ. ಹೊಸ ತಲೆಮಾರಿಗೆ ಹಿರಿಯರನ್ನು ಪರಿಚಯಿಸುವ ಕಾರ್ಯ ಸ್ತುತ್ಯರ್ಹ ಎಂದು ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು. 


ಅವರು ಶ್ರೀ ಎಡನೀರು ಮಠದಲ್ಲಿ ಜರಗಿದ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ ಕೂಡ್ಲು ಇದರ 'ರಜತ ರಂಗ' ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ 24ನೇ ಕಾರ್ಯಕ್ರಮದಲ್ಲಿ ಶ್ರೀಗಳು ಅನುಗ್ರಹ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಯಕ್ಷಗಾನದ ಭೀಷ್ಮ ಕೀರ್ತಿಶೇಷ ಡಾ.ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ಸಂಸ್ಮರಣೆ ನಡೆಯಿತು.

ಯಕ್ಷಗಾನ ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಶೇಣಿಯವರಿಗೆ ನುಡಿ-ನಮನ ಸಲ್ಲಿಸಿ ಮಾತನಾಡಿದರು. ಶೇಣಿ ಗೋಪಾಲಕೃಷ್ಣ ಭಟ್ಟರು ಗತಿಸಿ ಎರಡು ದಶಮಾನ ಸಂದಿತು. ಈಗಲೂ 'ಶೇಣಿ' ಅಂದರೆ ಸಾಕು ತಾಳಮದ್ದಳೆಯ ಮಾತಿನ ಲೋಕ ಕಣ್ಣೆದುರು ನಿಲ್ಲುತ್ತದೆ. ಮಾತಿನ ಲೋಕದ ಮಹಾಕವಿಯಾಗಿ ಮಾತಿಗೆ ಮೇಲೆಯ ಕಾಣೆಯನ್ನು ನೀಡಿದವರು. ಶೇಣಿಯವರು ಸೇರಿದಂತೆ ಆ ಕಾಲಘಟ್ಟದ ಅರ್ಥದಾರಿಗಳ ಅರ್ಥದ ಪ್ರಖರತೆಯು ಬುದ್ದಿಗೆ ಗ್ರಾಸವನ್ನು ಒದಗಿಸುತ್ತಿತ್ತು. ಜತೆಜತೆಗೆ ಪ್ರೇಕ್ಷಕರನ್ನು ಕೂಡಾ ಪ್ರಬುದ್ಧರನ್ನಾಗಿಸಿದ ಕೀರ್ತಿ ಹಿರಿಯರಿಗೆ ಸಲ್ಲುತ್ತದೆ." ಎಂದರು. ವೇದಿಕೆಯಲ್ಲಿ ತೇಣಿಯವರ ಮೊಮ್ಮಗ ವೇಣುಗೋಪಾಲ್ ಶೇಣಿ ಉಪಸ್ಥಿತರಿದ್ದರು.

ಭಾಗವತರಾದ ತಲ್ಪಣಾಜೆ ವೆಂಕಟ್ರಮಣ ಭಟ್ ಮತ್ತು ರಾಮಪ್ರಸಾದ್ ಮಯ್ಯ ಕೂಡ್ಲು ಶ್ರೀಗಳಿಗೆ ಫಲವನ್ನು ಸಮರ್ಪಿಸಿದರು. ಕಲಾವಿದ ವಿಕ್ರಮ ಮಯ್ಯರ ಪ್ರಾರ್ಥನೆಯೊಂದಿಗೆ ಆರಂಭವಾದ ರಜತ ರಂಗ ಕಾರ್ಯಕ್ರಮದಲ್ಲಿ ಜಗದೀಶ ಕೂಡ್ಲು ನಿರ್ವಹಿಸಿ, ವಂದಿಸಿದರು. ಕಲಾವಿದ ವೆಂಕಟ್ ಭಟ್ ಎಡನೀರು ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಪ್ರಾಯೋಜನೆ ನೀಡಿದ ಹಿರಿಯ ಕಲಾವಿದರಾದ ವಿಷ್ಣು ಭಟ್ ಕಕ್ಕೆಪ್ಪಾಡಿ, ಮಧೂರು ಇವರನ್ನು ಗೌರವಿಸಲಾಯಿತು.

ಬಳಿಕ ತರಬೇತಿ ಕೇಂದ್ರದ ಸದಸ್ಯರಿಂದ 'ಇಂದ್ರಜಿತು ಕಾಳಗ' ಪ್ರಸಂಗದ ಬಯಲಾಟ ಜರಗಿತು. ತಲ್ಪಣಾಜೆ ವೆಂಕಟ್ರಮಣ ಭಟ್, ರಾಮಪ್ರಸಾದ್ ಮಯ್ಯ. ವಿಕ್ರಮ್ ಮಯ್ಯ, ರಿತೇಶ್ ಅಡ್ಕ, (ಹಿಮ್ಮೇಳ) ವೇಣುಗೋಪಾಲ್ ಶೇಣಿ, ಪ್ರಕಾಶ್ ನಾಯಕ್ ನೀರ್ಚಾಲು, ಕಿಶೋರ್ ಕೂಡ್ಲು, ಪುನೀತ್ ಬೋಳಿಯಾರ್, ವಿಘ್ನೇಶ ಕಾರಂತ ಕೂಡ್ಲು, ಆಕಾಶ್ ಕೂಡ್ಲು.  ಅರ್ಜುನ್ ಕೂಡ್ಲು, ಶ್ರೀವತ್ಸ ಕೂಡ್ಲು (ಪಾತ್ರವರ್ಗ) ಭಾಗವಹಿಸಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries