ಕಾಸರಗೋಡು: ಬೇಕಲ ಪೆÇಲೀಸ್ ಠಾಣೆ ವ್ಯಾಪ್ತಿಯ ಪನೆಯಾಲ್ ಬಟ್ಟತ್ತೂರು ಪೂಮಂಚಾಳ್ ನಿವಾಸಿ ಆರತಿ (22) ನಾಪತ್ತೆಯಾಗಿರುವ ಬಗ್ಗೆ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆರತಿ ತಾಯಿ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ. ಆಗಸ್ಟ್ 31ರಂದು ಮನೆಯಿಂದ ತೆರಳಿದ ಈಕೆ ವಾಪಸಾಗಿಲ್ಲ ಎಂದು ತಾಯಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪೆÇಲೀಸರು ನಡೆಸಿದ ತನಿಖೆಯಲ್ಲಿ ಯುವತಿ ಕೋಯಿಕ್ಕೋಡಿನಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.


