ಕಾಸರಗೋಡು: ವೆಳ್ಳರಿಕುಂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಂಪತಿ ಮೃತದೇಹ ಮನೆಯ ಹಿತ್ತಲಿನಲ್ಲಿರುವ ಕೆರೆಯೊಂದರಲ್ಲಿ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಯೋರ್ಟ್‍ಚಾಲ್ ತಡದಿಲ್ ಮನೆಯ ಸಾಬು (56) ಮತ್ತು ಇವರ ಪತ್ನಿ ಸಜಿ ಸಾಬು (52)ಮೃತಪಟ್ಟವರು. ಶುಕ್ರವಾರ ಸಂಜೆ ವೇಳೆ ಮನೆಯ ಬಳಿಯ ಕೆರೆಯಲ್ಲಿ ಇವರ ಮೃತದೇಹ ಪತ್ತೆಯಾಘಿದೆ.
ಮನೆ ಸನಿಹದ ಕೆರೆಯಲ್ಲಿ ಇಬ್ಬರ ಮೃತದೇಹ ಕಂಡುಬಂದಿರುವ ಬಗ್ಗೆ ಸ್ಥಳೀಯರು ಪೆÇಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ವೆಳ್ಳರಿಕುಂಡು ಠಾಣೆ ಪೆÇಲೀಸರು ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ದಂಪತಿ ಸಾವಿನಲ್ಲಿ ನುಗೂಢತೆ ಕಂಡುಬಂದಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

