ಕಾಸರಗೋಡು: ಕಲೆಕ್ಟರೇಟ್ ಸಿಬ್ಬಂದಿ ಮಂಡಳಿಯ ಆಶ್ರಯದಲ್ಲಿ ನಾಯನ್ಮಾರ್ಮೂಲೆ ನೈಫ್ ವೇದಿಕೆಯಲ್ಲಿ ನೌಕರರ ಸ್ನೇಹ ಸಂಗಮ ನಡೆಯಿತು. ಜಿಲ್ಲಾಧಿಕಾರಿ ಶ್ರೀಧನ್ಯ ಸುರೇಶ್ ಸಮಾರಂಭವನ್ನು ಉದ್ಘಾಟಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಮುಖ್ಯ ಅತಿಥಿಯಾಗಿದ್ದರು. ಕಾಸರಗೋಡು ಎ.ಡಿ.ಎಂ.ಪಿ. ಉದಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಿಬ್ಬಂದಿ ಕಾರ್ಯದರ್ಶಿ ಸುರೇಶ್ ಪೆರಿಯಂಗಾನಂ ಸ್ವಾಗತಿಸಿ, ಜಂಟಿ ಕಾರ್ಯದರ್ಶಿ ಕೆ. ಮುಕುಂದನ್ ವಂದಿಸಿದರು. ನೌಕರರು ಒಪ್ಪನ, ಸ್ಕಿಟ್, ನೃತ್ಯ, ಯಕ್ಷಗಾನ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.


