ಮಂಜೇಶ್ವರ: ಮಂಗಳೂರಿನಿಂದ ಕಾಸರಗೋಡಿಗೆ ಸಂಚರಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸಿನಲ್ಲಿ ಸಾಗಿಸುತ್ತಿದ್ದ 1.8 ಲೀಟರ್ ಕರ್ನಾಟಕ ನಿರ್ಮಿತ ವಿದೇಶಿಮದ್ಯವನ್ನು ಅಬಕಾರಿ ಅಧಿಕಾರಿಗಳು ಮಂಜೇಶ್ವರದಲ್ಲಿ ವಶಪಡಿಸಿಕೊಂಡಿದ್ದಾರೆ.
ಮಂಜೇಶ್ವರ ಅಬಕಾರಿ ಚೆಕ್ ಪೆÇೀಸ್ಟ್ನಲ್ಲಿ ಭಾನುವಾರ ವಾಹನ ತಪಾಸಣೆ ನಡೆಸುವ ವೇಳೆ ಬಸ್ನಲ್ಲಿ ಮದ್ಯ ಪತ್ತೆಯಾಗಿದೆ. ಮದ್ಯ ಸಾಗಾಟಗಾರನ ಮಾಹಿತಿ ಲಭ್ಯವಾಗಿಲ್ಲ. ಅಬಕಾರಿ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್ ನೇತೃತ್ವದ ಅಬಕಾರಿ ದಳ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.

