HEALTH TIPS

ಬ್ಯಾಂಕ್ ಆಫ್ ಅಮೆರಿಕ ವಿಪಿ ಹತ್ಯೆ ಮಾಡಿದ ಮಹಿಳೆಗೆ Times Squareನಲ್ಲಿ ಗುಂಡು

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಸದಾ ಗಿಜಿಗಿಡುವ ಟೈಮ್ಸ್ ಸ್ಕ್ವೇರ್‌ನಲ್ಲಿ ಇರಿತ ಮತ್ತು ಗುಂಡಿನ ಮೊರೆತ ಜನರ ನಿದ್ದೆಗೆಡಿಸಿದೆ.


ಬ್ಯಾಂಕ್ ಆಫ್ ಅಮೆರಿಕದ 32 ವರ್ಷದ ಉಪಾಧ್ಯಕ್ಷೆ ಎರಿನ್ ಪಿಯಾಸೆಂಟಿ ಅವರನ್ನು ಇರಿದು ಕೊಂದ ಮಹಿಳೆಯೊಬ್ಬರು, ನಂತರ 68 ವರ್ಷದ ಹಿರಿಯರೊಬ್ಬರಿಗೂ ಇರಿದಿದ್ದಾರೆ.

ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಶರಣಾಗುವಂತೆ ಮಹಿಳೆಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಇದಕ್ಕೊಪ್ಪದ ಮಹಿಳೆ, ತನ್ನ ಕೈಗಳಲ್ಲಿ ಹಿಡಿದಿದ್ದ ಚಾಕುವನ್ನು ಪ್ರದರ್ಶಿಸುತ್ತಲೇ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದಾಳೆ. ಪೊಲೀಸರು ಆತ್ಮರಕ್ಷಣೆಗಾಗಿ ತಕ್ಷಣ ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ.

ಈ ಎಲ್ಲಾ ದೃಶ್ಯಗಳು ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

'ಈ ದಾಳಿಯು ಆಕಸ್ಮಿಕ ಮತ್ತು ಅಪ್ರಚೋದಿತವಾಗಿತ್ತು. ಚಾಕು ಹಿಡಿದಿದ್ದ ಮಹಿಳೆಯನ್ನು ಶರಣಾಗಲು ಪೊಲೀಸರು ಪ್ರಯತ್ನ ನಡೆಸಿದರು. ಅದು ವಿಫಲವಾದಾಗ ಗುಂಡು ಹಾರಿಸಿದರು' ಎಂದು ನ್ಯೂಯಾರ್ಕ್ ಪೊಲೀಸ್ ಆಯುಕ್ತೆ ಜೆಸ್ಸಿಕಾ ಟಿಶ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ದಾಳಿ ನಡೆಸಿದ ಲ್ಯೂಗಿ ಮ್ಯಾಂಗಿಯೊನಿ ಎಂಬಾಕೆ ನ್ಯೂಯಾರ್ಕ್‌ ನಗರದ ಬೀದಿಯೊಂದರಲ್ಲಿ 2024ರಲ್ಲಿ ಯುನೈಟೆಡ್‌ ಹೆಲ್ತ್‌ಕೇರ್‌ನ ಸಿಇಒ ಬ್ರಿಯಾನ್ ಥಾಂಪ್ಸನ್‌ ಎಂಬುವವರನ್ನು ಹತ್ಯೆ ಮಾಡಿದ್ದರು. ಈ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಈಕೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಳು.

ಕಿರಿಯ ವಯಸ್ಸಿನವರಾದ ಎರಿನ್‌ ಸಾವಿಗೆ ಬ್ಯಾಂಕ್ ನೌಕರರು ಕಂಬನಿ ಮಿಡಿದಿದ್ದಾರೆ. ಬ್ಯಾಂಕ್ ವತಿಯಿಂದಲೂ ಸಂತಾಪ ವ್ಯಕ್ತಪಡಿಸಲಾಗಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries