ಚಂಡೀಗಢ (PTI): ಭಾರತ ಹಾಕಿ ತಂಡದಲ್ಲಿ ಎರಡೂವರೆ ದಶಕಗಳ ಹಿಂದೆ ನಾಯಕರಾಗಿ ಮಿಂಚಿದ್ದ ಪರ್ಗತ್ ಸಿಂಗ್ ಅವರು ಈಗ ಪಂಜಾಬ್ ರಾಜ್ಯ ಕಾಂಗ್ರೆಸ್ ಘಟಕದ ಚುಕ್ಕಾಣಿ ಹಿಡಿಯುವ ಮೂಲಕ ರಾಜಕೀಯ ವಲಯದಲ್ಲೂ ಮಹತ್ವದ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮೂರು ಬಾರಿ ಶಾಸಕರಾಗಿರುವ ಪರ್ಗತ್(61) ಅವರನ್ನು ಪಂಜಾಬ್ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ ಶುಕ್ರವಾರ ನೇಮಿಸಲಾಗಿದೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷದ ಹೈಕಮಾಂಡ್ ಈ ಬದಲಾವಣೆಯನ್ನು ಮಾಡಿದೆ. ಇದಕ್ಕೂ ಮೊದಲು ಅಮರೀಂದರ್ ಸಿಂಗ್ ರಾಜಾ ಅವರು ಅಧ್ಯಕ್ಷರಾಗಿದ್ದರು.
ಮುಂಬರುವ ಚುನಾವಣೆಗೆ ಪ್ರಚಾರಕ್ಕೆ ಹೊಡೆತ ನೀಡಬಹುದಾದ ಆಂತರಿಕ ಕಲಹವು ಪಂಜಾಬ್ ಕಾಂಗ್ರೆಸ್‌ನಲ್ಲಿ ನಡೆದ ಕೆಲ ವಾರಗಳ ಬಳಿಕ ರಾಜ್ಯ ನಾಯಕತ್ವದ ಬದಲಾವಣೆಯಾಗಿದೆ.
2012ರಲ್ಲಿ ಶಿರೋಮಣಿ ಅಕಾಲಿ ದಳದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಪರ್ಗತ್ ಸಿಂಗ್ ಅವರು, 2016ರಲ್ಲಿ ಪಕ್ಷದಿಂದ ಅಮಾನತುಗೊಂಡಿದ್ದರು. 2017ರಲ್ಲಿ 'ಅವಾಜ್-ಇ-ಪಂಜಾಬ್' ಭಾಗವಾಗಿದ್ದ ಅವರು ಬಳಿಕ ಕಾಂಗ್ರೆಸ್‌ಗೆ ಸೇರಿದ್ದರು. ಪಕ್ಷದ ಹಲವು ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.
ಪರ್ಗತ್ ಸಿಂಗ್ , ಕಾಂಗ್ರೆಸ್ ಪಂಜಾಬ್ ರಾಜ್ಯ ಘಟಕದ ನೂತನ ಅಧ್ಯಕ್ಷನಾನು ಯಾವಾಗಲೂ ಪೂರ್ಣಪ್ರಮಾಣದಲ್ಲಿ ಆಡುತ್ತೇನೆ. ನಮ್ಮ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ಸರ್ವಾನುಮತದಿಂದ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ.

