HEALTH TIPS

ಆಡಳಿತ ಸಮಿತಿ ವಿರುದ್ಧ ನಕಲಿ ಸುದ್ಧಿ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಪುತ್ತಿಗೆ ಪಂಚಾಯತ್ ಕಾನೂನು ಕ್ರಮಕ್ಕೆ

ಕುಂಬಳೆ: ಪುತ್ತಿಗೆ ಪಂಚಾಯತ್ ಆಡಳಿತ ಸಮಿತಿ ಹಾಗೂ ನೌಕರರ ವಿರುದ್ಧ ಸಿಪಿಎಂ ನಡೆಸುವ ಅಪವಾದ ಪ್ರಚಾರದ ವಿರುದ್ಧ ಕಾನೂನು ಕ್ರಮ ಸ್ವೀಕರಿಸುವುದಾಗಿ ಆಡಳಿತ ಸಮಿತಿ ಸುದ್ಧಿಗೋಷ್ಠಿಯಲ್ಲಿ ತಿಳಿಸಿದೆ. ಆಧಾರರಹಿತವಾದ ಆರೋಪಗಳ ಮೂಲಕ ಪಂಚಾಯತ್ ಆಡಳಿತವನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಹಾನಿಗೊಳಿಸಲಿರುವ ಯತ್ನ ನಡೆ ಯುತ್ತಿದೆ ಎಂದು ಆಡಳಿತ ಸಮಿತಿ ದೂರಿದೆ.  ಆಡಳಿತ ಸಮಿತಿ ಸದಸ್ಯರು, ನೌಕರರು ಔದ್ಯೋಗಿಕ ರಜಾದಿನದಂದು ಸ್ವಂತ ವೆಚ್ಚದಲ್ಲಿ ನಡೆಸಿದ ಪ್ರಯಾಣವನ್ನು ಪ್ರಾಯೋಜಿತ ಪ್ರಯಾಣವಾಗಿ ಚಿತ್ರೀಕರಿಸಿ ನಕಲಿ ಸುದ್ಧಿ ಪ್ರಚಾರಪಡಿ ಸುತ್ತಿರುವುದಾಗಿ ಅವರು ಆರೋಪಿಸಿದರು.


ಪ್ರಯಾಣಕ್ಕೆ ಪಂಚಾಯತ್‌ನ, ಗುತ್ತಿಗೆದಾರರ ಹಣವನ್ನು ಉಪಯೋಗಿಸಿಲ್ಲವೆಂದು ಈ ಬಗ್ಗೆ ದಾಖಲೆಗಳನ್ನು ಹಾಜರುಪಡಿಸಲಾಗಿದೆ ಎಂದು ಆಡಳಿತ ಸಮಿತಿ ಸ್ಪಷ್ಟಪಡಿಸಿದೆ. ಸಿಪಿಎಂ ನಿಯಂತ್ರಣದಲ್ಲಿರುವ ಚ್ಯಾನೆಲ್‌ಗಳಲ್ಲಿ ಸಹಿತ ಪ್ರಕಟಗೊಂಡ ನಕಲಿ ಸುದ್ಧಿಗಳನ್ನು ಹಿಂತೆಗೆದು ತಿದ್ದುಪಡಿ ನೀಡಬೇಕು. 

ಇದಕ್ಕಾಗಿ 5೦ ಲಕ್ಷ ರೂ. ನಷ್ಟ ಪರಿಹಾರ ಆಗ್ರಹಿಸಿ ಸಂಬಂಧಪಟ್ಟ ಮಾಧ್ಯಮಗಳಿಗೆ ನೋಟೀಸು ನೀಡಿರುವುದಾಗಿಯೂ, ಅಕ್ಟೋಬರ್ ೫ರಂದು ಪ್ರತ್ಯೇಕ ಆಡಳಿತ ಸಮಿತಿ ಸಭೆ ಸೇರಿ ಮುಂದಿನ ಕಾನೂನು ಕ್ರಮಗಳ ಬಗ್ಗೆ ತೀರ್ಮಾನಿಸುವುದಾ ಗಿಯೂ ಆಡಳಿತ ಸಮಿತಿ ತಿಳಿಸಿದೆ. ಪಂಚಾಯತ್‌ನ ಅಭಿವೃದ್ಧಿ ಚಟುವಟಿಕೆಗಳನ್ನು ತಡೆಯುವುದಕ್ಕೆ, ಆಡಳಿತ ಸಮಿತಿಗೆ ಅಪಕೀರ್ತಿ ತಂದೊಡ್ಡುವುದಕ್ಕಿರುವ ಯತ್ನಗಳನ್ನು ಕಾನೂನು ಪರವಾಗಿ ಎದುರಿಸುವುದಾಗಿ ಯೂ ಪಂಚಾಯತ್ ಅಧ್ಯಕ್ಷೆ ಆಯಿಷಾ ಶಹೀಮಾ ಫಿದ, ಉಪಾಧ್ಯಕ್ಷ ಇ.ಕೆ. ಮೊಹಮ್ಮದ್ ಕುಂಞಿ, ಸದಸ್ಯ ಎಸ್.ಎ. ಅಬ್ದುಲ್ಲ ಎಂಬಿವರು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 







 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries