HEALTH TIPS

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಹೆಚ್ಚಿನ ಹೊಂದಾಣಿಕೆ ಅಸಾಧ್ಯ ಎಂದ ನಿರ್ಮಲಾ

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆ ಒಂದು ಹಂತಕ್ಕೆ ಬಂದು ನಿಂತಿವೆ. ಅದರಿಂದ ಆಚೆಗೆ ಹೆಚ್ಚಿನ ಹೊಂದಾಣಿಕೆ ಅಸಾಧ್ಯ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ. 


ನವದೆಹಲಿಯಲ್ಲಿ ನಡೆದ ಮ್ಯೂನಿಚ್‌ ಲೀಡರ್ಸ್‌ ಸಭೆಯಲ್ಲಿ ಮಾತನಾಡಿರುವ ಸಚಿವೆ, 'ಉಭಯ ದೇಶಗಳ ನಡುವಣ ಮಾತುಕತೆಯು ಯಾವುದೇ ಪ್ರಗತಿಯನ್ನು ಕಾಣದ ಹಂತವನ್ನು ತಲುಪಿರುವಂತಿದೆ.

ಅದರ ಆಚೆಗೆ ಕೊಡು-ಕೊಳ್ಳುವಿಕೆಯು ಬಹಳ ಕಷ್ಟದ್ದು' ಎಂದು ಹೇಳಿದ್ದಾರೆ.

ಆದಾಗ್ಯೂ ಮಾತುಕತೆ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿರುವ ಸಚಿವೆ, 'ಇದು ತುಂಬಾ ಕಠಿಣವಾದ ಒಪ್ಪಂದವಾಗಿದೆ' ಎಂದಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಣ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ (ಬಿಟಿಎ) ಸಂಬಂಧಿಸಿದ ಮಾತುಕತೆ 2025ರ ಫೆಬ್ರವರಿಯಲ್ಲಿ ಆರಂಭವಾಗಿತ್ತು. ಹಲವು ಸುತ್ತಿನ ಮಾತುಕತೆಗಳ ನಂತರ ಇದೇ ಫೆಬ್ರವರಿಯಲ್ಲಿ ಒಪ್ಪಂದದ ಮಧ್ಯಂತರ ಚೌಕಟ್ಟನ್ನು ಬಿಡುಗಡೆ ಮಾಡಿದ್ದವು.

ಎರಡೂ ದೇಶಗಳು, ಒಪ್ಪಂದ ಬಹುತೇಕ ಅಂತಿಮ ಹಂತ ತಲುಪಿದೆ ಎಂದು ಹೇಳಿಕೊಂಡಿದ್ದವು. ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸರ್ಗಿಯೊ ಗೋರ್ ಅವರು, ಒಪ್ಪಂದ ಶೇ 99ರಷ್ಟು ಪೂರ್ಣಗೊಂಡಿದೆ ಎಂದು ಜೂನ್‌ನಲ್ಲಿ ಹೇಳಿಕೆ ನೀಡಿದ್ದರು. ಭಾರತದ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರೂ ಕಳೆದ ತಿಂಗಳು ಇದೇ ರೀತಿ ಹೇಳಿದ್ದರು.

ಜಿ20 ರಾಷ್ಟ್ರಗಳ ವಾಣಿಜ್ಯ ಸಚಿವರ ಸಭೆ ಸಲುವಾಗಿ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 5ರವರೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದ ಗೋಯಲ್‌, ಅಲ್ಲಿನ ವಾಣಿಜ್ಯ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಸಭೆಯ ನಂತರ ಗ್ರೀರ್ ಅವರು, 'ವ್ಯಾಪಾರ ಒಪ್ಪಂದವು ಸದ್ಯಕ್ಕೆ ಏರ್ಪಡುವ ಲಕ್ಷಣಗಳಿಲ್ಲ' ಎಂದು ಹೇಳಿದ್ದರು. ಎರಡೂ ದೇಶಗಳು ಒಪ್ಪಂದಕ್ಕೆ ಅಡ್ಡಿಯಾಗಿರುವ ಪ್ರಮುಖ ಸಮಸ್ಯೆಗಳನ್ನು ಗುರುತಿಸಿವೆ ಎಂದಿದ್ದರು.

'ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್' (ಜಿಟಿಆರ್‌ಐ) ಸಂಸ್ಥಾಪಕ ಅಜಯ್ ಶ್ರೀವಾಸ್ತವ ಅವರು, ಅಮೆರಿಕದ ಸುಂಕದ ಷರತ್ತುಗಳಿಗೆ ಸಂಬಂಧಿಸಿದ ವಿವಾದ ಇನ್ನೂ ಬಗೆಹರಿದಿಲ್ಲ' ಎಂದು ತಿಳಿಸಿದ್ದರು. 








 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries