ಕೃಷಿ ವಲಯಕ್ಕೆ ಯುವ ಸಮೂಹ ಸೆಳೆಯುವಲ್ಲಿ ಶ್ರೀಕ್ಷೇತ್ರದ ಯೋಜನೆ ಸಫಲ-ಶ್ರೀರಾಮ ಮೂಡಿತ್ತಾಯ ಪಾಂಡ್ಯಡ್ಕ
ಉಪ್ಪಳ: ಮುಂದಿನ ತಲೆಮಾರಿಗೆ ಜಲವನ್ನು ಸಂರಕ್ಷಿಸುವ ಬಗ್ಗೆ ಗಂಭೀರ ಚಿಂತನೆಗಳ ಅಗತ್ಯವಿದ್ದು, ಸಮರ್ಪಕ ಯೋಜನಾಬದ್ದತೆಯ ಸಮ್ಮಿಶ್ರ ಕೃಷಿ ಪದ್ದತಿಗಳ ಅನುಷ್ಠಾನಕ್ಕೆ ಒತ್ತು ನೀಡಬೇಕು ಎಂದು ಬಾಯಿಕಟ್ಟೆ ಶ್ರೀಅಯ್ಯಪ್ಪ ಭಜನಾ ಮಂದಿರದ ಗೌರವಾಧ್ಯಕ್ಷ ಶ್ರೀರಾಮ ಮೂಡಿತ್ತಾಯ ಪಾಂಡ್ಯಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪೈವಳಿಕೆ ವ್ಯಾಪ್ತಿಯ ಪ್ರಗತಿಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟ, ಮಂಗಳೂರಿನ ಸತ್ಯಮೇವ ಜಯತೇ ಚಾರಿಟೇಬಲ್ ಟ್ರಸ್ಟ್ ಮಂಜೇಶ್ವರ ವಲಯ ಹಾಗೂ ಪೈವಳಿಕೆ ಸೇವಾಸಹಕಾರಿ ಬ್ಯಾಂಕ್ ಗಳ ಸಹಯೋಗದೊಂದಿಗೆ ಶನಿವಾರ ಪೈವಳಿಕೆ ಸಮೀಪದ ಕಾಯರ್ಕಟ್ಟೆಯ ಕುಲಾಲ ಸಭಾ ಭವನದಲ್ಲಿ ಆಯೋಜಿಸಲಾದ ಕೃಷಿ ವಿಚಾರ ಸಂಕಿರಣವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ವಲಯಕ್ಕೆ ಯುವ ಸಮೂಹವನ್ನು ಸೆಳೆಯುವಲ್ಲಿ ಶ್ರೀಕ್ಷೇತ್ರದ ವಿವಿಧ ಯೋಜನೆಗಳು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ ಅವರು, ಕೃಷಿ ಕ್ಷೇತ್ರದ ಬಗೆಗಿನ ನಿರುತ್ಸಾಹಕರ ಮನೋಭಾವದಿಂದ ದೂರಗೊಂಡು ಧನಾತ್ಮಕ ಚಿಂತನೆಗಳೊಂದಿಗೆ ಮುಂದೆಬರಬೇಕೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪೈವಳಿಕೆ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಗಣಪತಿ ಭಟ್ ಕುಂಡೇರಿ ಮಾತನಾಡಿ, ಮುಂದಿನ ಕಾಲಘಟ್ಟ ತೀವ್ರ ನೀರಿನ ಅಭಾವ ಎದುರಿಸುವ ಭೀತಿಯಿದ್ದು, ಜಲ ಸಂರಕ್ಷಣೆಯ ಬಗ್ಗೆ ಕಳಕಳಿಯ ಯತ್ನಗಳಾಗಬೇಕು ಎಂದು ತಿಳಿಸಿದರು. ಕಡಿಮೆ ನೀರು ಬಳಕೆಯ, ಮಿಶ್ರ ವ್ಯವಸಾಯದ ಮೂಲಕ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದ್ದು, ಜಲಮರುಪೂರಣದಂತಹ ದೂರಗಾಮಿ ಯೋಜನೆಯ ಅಗತ್ಯವನ್ನು ಗಂಭೀರವಾಗಿ ಕಾರ್ಯಗತಗೊಳಿಸಬೇಕು. ಶ್ರೀಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯ ಬಹುಮುಖಿ ಚಿಂತನೆಗಳ ಯೋಜನೆಗಳು ನಮಗೊದಗಿಬಂದಿರುವ ಸುದೈವ ಎಂದು ಅಭಿಪ್ರಾಯಪಟ್ಟರು.
ಪ್ರಗತಿಪರ ಕೃಷಿಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಸಾವಯವ ಮಾದರಿಯ ಕೃಷಿ ಪ್ರಾಕೃತಿಕ ನೈಜತೆಯನ್ನು ಕಾಯ್ದಿರಿಸುವಲ್ಲಿ ಉತ್ತಮ ಕೃಷಿಪದ್ದತಿಯಾಗಿದ್ದು, ದೇಹ, ಮನಸ್ಸು ಸಹಿತ ಸಮಗ್ರ ಸಾಮಾಜಿಕ ಸೌಖ್ಯಕ್ಕೆ ದಾರಿದೀಪ ಎಂದು ತಿಳಿಸಿದರು.
ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ, ಬ್ಲಾಕ್ ಪಂಚಾಯತು ಸದಸ್ಯ ಪ್ರಸಾದ್ ರೈ ಕಯ್ಯಾರು, ಭಾರತೀಯ ಕಬ್ಬಡಿ ತಂಡದ ಮಾಜಿ ಉಪನಾಯಕ ಭಾಸ್ಕರ ರೈ ಮಂಜಲ್ತೋಡಿ, ರಾಜಕೀಯ ಮುಖಂಡ ಎ.ಅಬೂಬಕರ್, ಪ್ರಗತಿಪರ ಕೃಷಿಕ ಮೋನಪ್ಪ ಶೆಟ್ಟಿ ಕಟ್ನಬೆಟ್ಟು, ಮಂಗಳೂರಿನ ಸತ್ಯಮೇವ ಜಯತೇ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಸುದರ್ಶನ ರೈ, ಪ್ರಗತಿಪರ ಕೃಷಿಕ ಶಂಕರ ಭಂಡಾರಿ ನಡುಬೈಲು, ಬಾಯಿಕಟ್ಟೆ ಶ್ರೀಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಸುದರ್ಶನಪಾಣಿ ಬಲ್ಲಾಳ್, ಚಿಪ್ಪಾರು ಶ್ರೀವಿಷ್ಣುಮೂತರ್ಿ ದೇವಸ್ಥಾನದ ಕೋಶಾಧಿಕರಿ ಸುಬ್ಬಣ್ಣ ಭಟ್ ಕಜೆ, ಕುಲಾಲ ಸಂಘ ಪೈವಳಿಕೆ ಘಟಕಾಧ್ಯಕ್ಷ ಪೂವಪ್ಪ ಮಾಣಿಪ್ಪಾಡಿ, ಮೀನಾಕ್ಷಿ ಸಿ.ಕೆ.ಚಿಪ್ಪಾರು, ನಾಗೇಶ್ ಕುಲಾಲ್ ಕೋಡಂದೂರು, ರೋಹಿಣಿ, ಪರಮೇಶ್ವರ ಪೈವಳಿಕೆ, ಕೇಶವ ಬಾಯಿಕಟ್ಟೆ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಸತ್ಯಮೇವ ಜಯತೇ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದಶರ್ಿ ಅಶ್ವಥ್ ಪೂಜಾರಿ ಲಾಲ್ಬಾಘ್ ಸ್ವಾಗತಿಸಿ, ಯೋಜನೆಯ ಪೈವಳಿಕೆ ವಲಯ ಮೇಲ್ವಿಚಾರಕ ವಿಶ್ವನಾಥ ಗೌಡ ವಂದಿಸಿದರು. ಮೇಲ್ವಿಚಾರಕ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಯೋಜನೆಯ ಕಾಸರಗೋಡು, ದಕ್ಷಿಣ ಕನ್ನಡ ವಿಭಾಗೀಯ ನಿದರ್ೇಶಕ ಚಂದ್ರಶೇಖರ ನೆಲ್ಯಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಉಪಸ್ಥಿತರಿದ್ದರು.
ಬಳಿಕ ಕೃಷಿಯಲ್ಲಿ ನೀರಿನ ಸದ್ಬಳಕೆಯ ಬಗ್ಗೆ ಬೇಕೂರು ಸರಕಾರಿ ಹ್ಯಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಹರಿಶ್ಚಂದ್ರ ಬಿ ಸಂಪನ್ಮೂಲ ವ್ಯಕ್ತಿಗಳಾಗಿ ಸಮಗ್ರ ಮಾಹಿತಿಗಳನ್ನೊಳಗೊಂಡ ಕಾಯರ್ಾಗಾರ ನಡೆಸಿಕೊಟ್ಟರು. ಬಾಯಿಕಟ್ಟೆ ಶ್ರೀವಿಷ್ಣುಮೂತರ್ಿ ಆಟ್ಸರ್್ ಮತ್ತು ಸ್ಪೋಟ್ಸರ್್ ಕ್ಲಬ್, ಸುಭಾಶ್ ಫ್ರೆಂಡ್ಸ್ ಸರ್ಕಲ್ ಲಾಲ್ಬಾಘ್,ಯುವಶಕ್ತಿ ಪ್ರೆಂಡ್ಸ್ ಸರ್ಕಲ್ ಬೋಳಂಗಳ ತಂಡಗಳು ಸಹಕಾರ ನೀಡಿದ್ದವು.