HEALTH TIPS

ಯಾವುದೇ ಶೀರ್ಷಿಕೆಯಿಲ್ಲ

    ಸತ್ಕರ್ಮ ಮಾತ್ರ ಸಾಲದು, ಪ್ರಾಮಾಣೀಕತೆ ಬೇಕು ಉನ್ನತಿಗೆ-ವಸಂತ ಪೈ ಬದಿಯಡ್ಕ
      ಪೆರ್ಲ: ಸಮಸ್ತ ದೇವತೆಗಳಿಗೆ ಸುಬ್ರಾಯ ದೇವರು ದಂಡನಾಯಕನಾಗಿ ಮುನ್ನಡೆಸುವವ. ಎಂದರೆ ಶಿಕ್ಷಿಸುವವ ಎಂಬರ್ಥದಿಂದ ಗ್ರಹಿಸದೆ ಸುಧರ್ಮ ಜೀವನದ  ಶಿಕ್ಷಣ ನೀಡುವವ ಎಂದು  ಅಥರ್ೈಸಬೇಕು ಎಂದು ಎಂದು ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದ ಅಧ್ಯಕ್ಷ, ಹಿರಿಯ ಧಾಮರ್ಿಕ ಮುಂದಾಳು ವಸಂತ. ಪೈ ಬದಿಯಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
   ಅವರು ಕಾಟುಕುಕ್ಕೆ  ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಶನಿವಾರ ಮುಂಜಾನೆ ಧನು ಪೂಜಾ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಯುವ ಭಜನಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
   ಸ್ವಾರ್ಥ ರಹಿತ ಮನೋಭಾವದಿಂದ ದೇವರ ಸೇವೆ, ಕಾರ್ಯದ ಜೊತೆಗೆ ದಾನ ,ಧಮರ್ಾದಿ ಕಾರ್ಯಗಳನ್ನೂ ಯಾರು ಮಾಡುತ್ತಾನೋ ಅವನಿಗೆ ಯಾವುದೇ ಸೌಭಾಗ್ಯವೂ ಕೇಳದೆ ಒದಗುತ್ತದೆ. ನಮ್ಮ ಪೂರ್ವಜನ್ಮದ ಫಲದಲ್ಲಿ ಮಾಡಿದ ಸುಕೃತ ಕರ್ಮಗಳ ಪ್ರತಿಫಲವನ್ನು ನಾವು ಇಂದಿನ ಜನುಮದಲ್ಲಿ ಅನುಭವಿಸುತ್ತಿದ್ದೇವೆ. ವ್ಯಕ್ತಿಯೊಬ್ಬ ಸಜ್ಜನನಾಗಿದ್ದು ಸತ್ಕರ್ಮಗಳನ್ನು ಮಾಡಿದರೆ ಸಾಲದು ಅವನೊಳಗೆ ಪ್ರಾಮಾಣಿಕೆ ಇದ್ದರೆ ಬದುಕಿನಲ್ಲಿ ಉನ್ನತಿಯನ್ನು ಕಂಡುಕೊಳ್ಳುತ್ತಾನೆ. ಉಪನ್ಯಾಸ, ಉಪಾಧ್ಯಾಯ ಎಂಬ ಮೇರು ಪದಗಳು ಸತ್ ಧರ್ಮದ ಉನ್ನತಿಯತ್ತ ಕಂಡುಕೊಳ್ಳುವ ತಳಹದಿಯಾಗಿದೆ ಎಂದು ಅವರು  ಅಭಿಪ್ರಾಯ ಅಭಿವ್ಯಕ್ತಪಡಿಸಿದರು.
  ಹಿರಿಯ ಜ್ಯೋತಿಷಿ ಗಣೇಶ ಭಟ್ ಮುಳಿಯಾಲ ದೀಪ ಬೆಳಗಿಸಿ ಉದ್ಘಾಟಿಸಿದ ಸಮಾರಂಭದಲ್ಲಿ ಪಾಣಾಜೆ ರಣಮಂಗಲ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ  ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ ಅತಿಥಿಯಾಗಿ ಉಪಸ್ಥಿತರಿದ್ದರು.  ಮಿತ್ತೂರು ಪುರುಷೋತ್ತಮ ಭಟ್ ಸ್ವಾಗತಿಸಿ, ದೀಪಕ್ ಭಂಡಾರದ ಮನೆ  ವಂದಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries