ಕುಂಬಳೆ: ಪೇರಾಲು ಕಣ್ಣೂರಿನಲ್ಲಿ ಇ.ಕೆ.ನಾಯನಾರ್ ವಾಚನಾಲಯದ ಮೇಲೆ ಪಟಾಕಿ ಎಸೆದು ಹಾನಿಗೈದ ಪ್ರಕರಣದಲ್ಲಿ ಕುಂಬಳೆ ಪೋಲೀಸರು ದೂರು ದಾಖಲಿಸಿದ್ದಾರೆ.
ಶನಿವಾರ ಸಂಜೆ ಯುಡಿಎಫ್ ಕಾರ್ಯಕರ್ತರ ತಂಡ ಕೃತ್ಯವೆಸಗಿರುವುದಾಗಿ ಸಿಪಿಎಂ ಆರೋಪಿಸಿದೆ. ವಾಚನಾಲಯಕ್ಕೆ ಪಟಾಕಿ ಎಸೆದು, ಫ್ಲೆಕ್ಸ್ ಬೋರ್ಡುಗಳನ್ನು ಹಾನಿಗೊಳಿಸಲಾಗಿದೆ. ವಾಚನಾಲಯದ ಮುಂದೆ ನಿಲ್ಲಿಸಿದ್ದ ಹಸೈನಾರ್ ಕೋರಿತ್ತಳ(52) ಎಂಬವರಿಗೂ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಹಸೈನಾರ್ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.
ಘಟನೆ ಬಗ್ಗೆ ಸಿಪಿಎಂ ನೀಡಿದ ದೂರಿನಂತೆ ಕುಂಬಳೆ ಪೋಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

.jpg)
-HASAINUR.jpg)
