ಉಪ್ಪಳ: ಕೆ.ಎಸ್.ಪಿ.ಎಸ್. ಪೈವಳಿಕೆ ಘಟಕ ವತಿಯಿಂದ ಪಿಂಚಣಿದಾರರ ದಿನಾಚರಣೆಯ ಅಂಗವಾಗಿ ಪಾರ್ವತಿ ಅಮ್ಮ ದೇವಕಾನ ಪೈವಳಿಕೆ ಹಾಗೂ ಹಿರಿಯ ಸದಸ್ಯ ಪದ್ಯಾಣ ವೆಂಕಟ್ರಮಣ ಭಟ್ ಇವರನ್ನು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಅವರವರ ಮನೆಗೆ ತೆರಳಿ ಗೌರವಿಸಿದರು.
ಘಟಕದ ಅಧ್ಯಕ್ಷ ಕೇಶವ ಭಟ್ ಕರುವಜೆ ದಿನದ ಮಹತ್ವವನ್ನು ತಿಳಿಸಿ ಗೌರವಿಸಲ್ಪಟ್ಟವರಿಗೆ ನೆಮ್ಮದಿಯ ಆರೋಗ್ಯಪೂರ್ಣ ಜೀವನವನ್ನು ದೇವರು ಕರುಣಿಸಲಿ ಎಂದು ಎಲ್ಲರ ಪರವಾಗಿ ಹಾರೈಸಿದರು. ಕಾರ್ಯದರ್ಶಿ ಕೆ.ಎಂ. ಬಲ್ಲಾಳ್ ವಂದಿಸಿದರು. ವೆಂಕಟ್ರಮಣ ಭಟ್ಟರ ಪರವಾಗಿ ಅವರ ಸುಪ್ರತ್ರ ಸಂಘದ ಸದಸ್ಯರಾದ ಪ್ರಭಾಕರನ್ ಪಿ.ಎಸ್.sಅವರು ಕೃತಜ್ಞತೆಗಳನ್ನು ಸಲ್ಲಿಸಿ ಮಾತನಾಡಿ ಸಂಘವನ್ನು ಬಲಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.



