ಕಾಸರಗೋಡು: ಕಾಸರಗೋಡಿನ ವಿವಿಧಡೆಗಳ ಯುವ ಮತದಾರರು ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ವಾಸಿಸುತ್ತಿದ್ದವರನ್ನು ಕರೆತರಲು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ತಲಪ್ಪಾಡಿಗೆ 5 ಬಸ್, ಅಡ್ಯನಡ್ಕಕ್ಕೆ 2 ಬಸ್ ಗಳು, ಜಾಲ್ಸೂರು ಹಾಗೂ ಮಂಡೆಕೋಲಿಗೆ ಒಂದೊಂದು ಬಸ್ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 430 ಮಂದಿ ಆಗಮಿಸಿ ಮತಚಲಾಯಿಸಿ ರಾತ್ರಿ ಹಿಂತಿರುಗಿದರು.
ಮಂಜೇಶ್ವರ ಹಾಗೂ ಕಾಸರಗೋಡು ವಿಧಾನಸಭಾ ವ್ಯಾಪ್ತಿಯ ಪಂಚಾಯತಿಗಳಲ್ಲದೆ ದೇಲಂಪಾಡಿ, ಮುಳಿಯಾರ್, ಕುತ್ತಿಕೋಲ್ ಪಂಚಾಯತಿಗಳ ಮತದಾರರು ಈ ಬಾರಿ ಆಗಮಿಸಿದ್ದು ವಿಶೇಷವಾಗಿತ್ತು. ಬೆಂಗಳೂರು ಮಾತ್ರವಲ್ಲದೆ ಮೈಸೂರು, ಮಂಡ್ಯ, ಹಾಸನ ನಗರಗಳಲ್ಲಿ ಕಾಸರಗೋಡಿನ ಮತದಾರರೂ ಇವರಲ್ಲಿ ಸೇರಿದ್ದರು. ರವಿನಾರಾಯಣ ಗುಣಾಜೆ ಮತ್ತು ತಂಡ ನೇತೃತ್ವ ವಹಿಸಿದ್ದರು.
ಆರಂಭದಲ್ಲಿ ಮಂದಗತಿ, ಬಳಿಕ ವೇಗ:
ಮತದಾನ ಬೆಳಿಗ್ಗೆ 7ಕ್ಕೆ ಆರಂಭವಾಗಿದ್ದರೂ ಮಧ್ಯಾಹ್ನ 12.30-1 ಗಂಟೆಯ ವರೆಗೆ ಮತದಾನ ಮಂದಗತಿಯಲ್ಲಿದ್ದುದು ರಾಜಕೀಯ ಪಕ್ಷಗಳಿಗೆ ಅಲ್ಪ ಕಸಿವಿಸಿ ಉಂಟುಮಾಡಿತು. ಬಳಿಕ ಮತದಾರರ ಸರತಿ ಸಾಲು ಕಂಡುಬಂತು. ಈ ಮಧ್ಯೆ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಿ ಕರೆತರಲು ಹರಸಾಹಸ ಪಟ್ಟಿರುವುದು, ಮನೆಮನೆಗೆ ತೆರಳಿ ವಾಹನದ ಮೂಲಕ ಕರೆತರುವುದು ಮಾಡಬೇಕಾಯಿತು.



.jpg)
