ಪೆರ್ಲ : ಪೇಟೆಯಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಯುವಕರೋರ್ವರು ಮನೆಯಲ್ಲಿ ಫ್ಯಾನ್ ದುರಸ್ತಿಯ ವೇಳೆ ವಿದ್ಯುತ್ ಶಾಕ್ ಗೆ ಒಳಗಾಗಿ ಮೃತಪಟ್ಟ ಘಟನೆ ಇಂದು ಅಪರಾಹ್ನ ನಡೆದಿದೆ. ಮೃತರು ಪೆರ್ಲ ಸಮೀಪದ ಶಿವಗಿರಿ ನಿವಾಸಿ ಧನರಾಜ್ (40) ಎಂದು ಗುರುತಿಸಲಾಗಿದೆ.
ಬುಧವಾರ ಮಧ್ಯಾಹ್ನ ಮನೆಯಲ್ಲಿ ಫ್ಯಾನ್ ದುರಸ್ತಿಯ ವೇಳೆ ಇವರು ಅಘಾತಕ್ಕೊಳಗಾಗಿದ್ದಾರೆ. ತಕ್ಷಣ ಎಣ್ಮಕಜೆ ಗ್ರಾಮ ಪಂಚಾಯತ್ ಅಂಬುಲೆನ್ಸ್ ನಲ್ಲಿ ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಿಲ್ಲ. ಶಿವಗಿರಿ ನಿವಾಸಿ ಕೃಷ್ಣ ನಾಯ್ಕ್ - ಗಿರಿಜಾ ದಂಪತಿಗಳ ಪುತ್ರನಾದ ಮೃತರು ಪತ್ನಿ ದೀಪಾ, ಮಕ್ಕಳಾದ ನಿಶ್ಮಿತಾ, ವಿಜಿತ್, ಸಹೋದರ ಮೋಹನ್ ,ಸಹೋದರಿ ಕಮಲಾಕ್ಷಿ,ಮೋಹಿನಿ ಎಂಬಿವರನ್ನಗಲಿದ್ದಾರೆ. ಇವರ ನಿಧನಕ್ಕೆ ಪೆರ್ಲ ಪೇಟೆ ಆಟೋ ಚಾಲಕರು ಸಂತಾಪ ವ್ಯಕ್ತಪಡಿಸಿದ್ದಾರೆ.

