ಮುಳ್ಳೇರಿಯ: ಗುರುವಾರ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಮುಳಿಯಾರ್ ಗ್ರಾಮ ಪಂಚಾಯಿತಿಯಲ್ಲಿ ಮೂವರು ತದ್ರೂಪಿ ಸಹೋದರಿಯರು ಕುತೂಹಲ ಮೂಡಿಸಿದರು.
ರಂಜಿಷಾ, ರಂಜಿಮಾ ಮತ್ತು ರಂಜಿತಾ ಮತ ಚಲಾಯಿಸಲು ಒಟ್ಟಿಗೆ ಆಗಮಿಸಿದ್ದರು. ಮುಳಿಯಾರ್ ಗ್ರಾಮ ಪಂಚಾಯಿತಿಯ ಇರಿಯಣ್ಣಿ ಜಿಎಚ್‍ಎಸ್‍ಎಸ್‍ನಲ್ಲಿ ಮೂವರು ಮತ ಚಲಾಯಿಸಿದರು. ಮತದಾರರ ಸಾಲಿನಲ್ಲಿ ಮೂವರು ತದ್ರೂಪಿ ಸಹೋದರಿಯರು ಒಟ್ಟಿಗೆ ಇರುವುದನ್ನು ಗಮನಿಸಿದ ಇತರ ಮತದಾರರು ಮತ್ತು ಚುನಾವಣಾ ಅಧಿಕಾರಿಗಳಿಗೆ ಗಮನಾರ್ಹ ಅನುಭವವಾಗಿತ್ತು. ಇರಿಯಣ್ಣಿಯ ಗಂಗಾಧರನ್ ಮತ್ತು ರೋಹಿಣಿ ದಂಪತಿಗಳ ಪುತ್ರಿಯರಾದ ಇವರಲ್ಲಿ ರಂಜಿಶಾ ಮಲಬಾರ್ ಕ್ಯಾನ್ಸರ್ ಸೆಂಟರ್‍ನಲ್ಲಿ ಸಾಮಾಜಿಕ ತನಿಖಾಧಿಕಾರಿ. ರಂಜಿಮಾ ಕಾಸರಗೋಡಿನ ಫಸ್ಟ್ ಲರ್ನ್ ಲರ್ನಿಂಗ್ ಡಿಸೆಬಿಲಿಟಿ ಥೆರಪಿ ಸೆಂಟರ್‍ನಲ್ಲಿ ಸಮಾಜ ಸೇವಕಿ ಹಾಗೂ ರಂಜಿತಾ ಗೃಹಿಣಿ.



.jpeg)
