HEALTH TIPS

ಎಣ್ಮಕಜೆ ಪಂಚಾಯಿತಿ ಅಜಿಲಡ್ಕ-ಪರ್ತಜೆ ರಸ್ತೆ: ಕಾಮಗಾರಿಪೂರ್ತಿಗೊಂಡ ಮೂರೇ ತಿಂಗಳಲ್ಲಿ ಶಿಥಿಲ-ವಿಜಿಲೆನ್ಸ್ ತನಿಖೆಗೆ ಅರ್ಜಿ

ಪೆರ್ಲ: ಎಣ್ಮಕಜೆ ಪಂಚಾಯಿತಿಯ ಅಜಿಲಡ್ಕ-ಪರ್ತಾಜೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದು ಮೂರು ತಿಂಗಳು ಪೂರ್ತಿಗೊಳ್ಳುವ ಮೊದಲೇ ಶಿಥಿಲಾವಸ್ಥೆ ತಲುಪಿರುವ ಬಗ್ಗೆ ಸ್ಥಳೀಯ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  


ಪಂಚಾಯಿತಿ ಫಂಡ್ ಮೂಲಕ 615 ಮೀಟರ್ ವರೆಗೆ ರಸ್ತೆಯನ್ನು ಸುಮಾರು 11ಲಕ್ಷ ರೂ. ವೆಚ್ಚದಲ್ಲಿ  ಕಾಂಕ್ರೀಟೀಕರಣ ಹಾಗೂ ಡಾಂಬರೀಕರಣದೊಂದಿಗೆ ಅಭಿವೃದ್ಧಿಪಡಿಸಲಾಗಿತ್ತು. ಕಾಮಗಾರಿ ಪೂರ್ತಿಗೊಳಿಸಿ ಎರಡುತಿಂಗಳು ಕಳೆಯುತ್ತಿದ್ದಂತೆ ರಸ್ತೆ ಡಾಂಬಾರು ಹಾಗೂ ಕಾಂಕ್ರೀಟ್ ಕಿತ್ತು ಮೇಲೆ ಬರಲಾರಂಭಿಸಿದೆ. ಮಳೆಗಾಲದಲ್ಲಿ ಅತ್ಯಂತ ಶಿಥಿಲಗೊಳ್ಳುತ್ತಿರುವ ಪ್ರಸಕ್ತ ರಸ್ತೆ ಅಭಿವೃದ್ಧಿಗೊಳ್ಳುತ್ತಿರುವ ಬಗ್ಗೆ ಸಂತೋಷಗೊಂಡಿದ್ದ ಊರಿನ ಜನತೆಗೆ ನಿರಾಸೆ ಎದುರಾಗಿದೆ. 

ಕಳಪೆ ಕಾಮಗಾರಿಯ ಬಗ್ಗೆ ಸ್ಥಳೀಯ ಮತದಾರರು ವಿಜಿಲೆನ್ಸ್‍ಗೆ ದೂರು ಸಲ್ಲಿಸಿದ್ದು, ಸಮಗ್ರ ತನಿಖೆ ನಡೆಸಿ ಕಳಪೆ ಕಾಮಗಾರಿಗೆ ಕಾರಣರಾದವರನ್ನು ಪತ್ತೆಹಚ್ಚಿ ಶಿಕ್ಷಿಸುವಂತೆ ಆಗ್ರಹಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries