ಬದಿಯಡ್ಕ: ಮಾರ್ಚ್ 29 ರಿಂದ ಏಪ್ರಿಲ್ 3ರ ತನಕ ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವವು ನಡೆಯಲಿದ್ದು ಪೂರ್ವಭಾವಿಯಾಗಿ ವಾರ್ಡು ಸದಸ್ಯ ಮಧುಸೂಧನ ಉಕ್ಕಿನಡ್ಕ ಇವರ ನೇತೃತ್ವದಲ್ಲಿ ಶುಚಿತ್ವ ಕಾರ್ಯವನ್ನು ನಡೆಸಲಾಯಿತು.
ಉಕ್ಕಿನಡ್ಕದಿಂದ ದೇವಸ್ಥಾನಕ್ಕೆ ಸಾಗುವ ರಸ್ತೆಯ ಎರಡೂ ಬದಿಗಳ ಕಾಡನ್ನು ತೆರವುಗೊಳಿಸಿದ ಕಾರ್ಯಕರ್ತರು ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಳನ್ನು ಶೇಖರಿಸಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದರು. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಸಂದೀಪ್, ವಿವಿಧ ವಾರ್ಡುಗಳ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಮೇಗಿನಕಡಾರು, ಉಷಾ ಪಳ್ಳತ್ತಡ್ಕ, ಶ್ಯಾಮಪ್ರಸಾದ ಸರಳಿ, ಪ್ರಮುಖರಾದ ನಾರಾಯಣ ಪೆರಡಾಲ ಜೊತೆಗಿದ್ದರು. ವಾರ್ಡು ಸದಸ್ಯ ಮಧುಸೂದನ ಕಂಗಿಲ ಸ್ವಾಗತಿಸಿದರು.

.jpg)
.jpg)
