HEALTH TIPS

ಬನವಾಸಿಯಲ್ಲಿ ಎನ್.ಸಿ.ಸಿ. ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆ

ಬದಿಯಡ್ಕ: ವಿಶ್ವಪರಿಸರ ದಿನದ ಅಂಗವಾಗಿ ಕಾಸರಗೋಡು ಸರ್ಕಾರಿ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗಳು ಕಾಲೇಜು ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆಯವರ ನೀರ್ಚಾಲು ಬನವಾಸಿ ಪ್ರಕೃತಿಧಾಮಕ್ಕೆ ಭೇಟಿ ನೀಡಿ ವಿಶ್ವಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.


ಎನ್.ಸಿ.ಸಿ. ಹಿರಿಯ ಹಾಗೂ ಕಿರಿಯ ಕೇಡೆಟ್ಸ್ ಗಳು ಪಾಲ್ಗೊಂಡರು. ಬನವಾಸಿಯ ಸೌರಯೋಜನೆ, ಜಲಮರುಪೂರಣ ವ್ಯವಸ್ಥೆ, ಮಳೆಕೊಯ್ಲು ವ್ಯವಸ್ಥೆಗಳನ್ನು ವೀಕ್ಷಿಸಿದರು. ಈ ಕುರಿತು ಡಾ.ರತ್ನಾಕರ ಮಲ್ಲಮೂಲೆಯವರ ಜೊತೆ ಸಂವಾದ ನಡೆಸಿದರು. ಬನವಾಸಿಯ ಸೀತಾವನ ಔಷಧೀಯ ತೋಟದಲ್ಲಿ ರಾಮಪತ್ರೆ ಗಿಡವೊಂದನ್ನು ನೆಟ್ಟು ವಿಶ್ವಪರಿಸರ ದಿನವನ್ನು ಅರ್ಥಪೂರ್ಣಗೊಳಿಸಿದರು.

ತಂಡದಲ್ಲಿ ಸೀನಿಯರ್ ಅಂಡರ್ ಆಫಿಸರ್ ವರ್ಷ ಎಂ ಆರ್, ಅಂಡರ್ ಆಫಿಸರ್ ಅಮೃತಾ ಪಿ, ಸರ್ಜೆಂಟ್ ಸಾಯಿರಾಜ್, ಸಜೆರ್ಂಟ್ ವರ್ಷಿಣಿ ಬಿ.ಎನ್, ಕೇಡೆಟ್ಸ್ ಗಳಾದ ರೇವತಿ ಕೆ, ಅರ್ಜುನ್ ಕೆ, ಶಿವನಂದನ ಕೆ.ವಿ, ವಿನೋಲ ಡಿಸೋಜ, ಮಿಥುನ್ ರಾಜ್, ಸಮೀಕ್ಷ, ಹರ್ಷಕುಮಾರ್, ದಿವ್ಯ, ಸುಶ್ಮಿತ ಮುಂತಾದವರು ಭಾಗವಹಿಸಿದ್ದರು. ವರ್ಷ ಎಂ.ಆರ್. ನೇತೃತ್ವ ವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries