ಸೈಬರ್ ಕಳ್ಳರು '2 ನಿಮಿಷದ ವಿಡಿಯೋ' ಎಂಬ ಹೆಸರಿನಲ್ಲಿ ಲಿಂಕ್ ಕಳುಹಿಸಿ ಹೊಸ ರೀತಿಯಲ್ಲಿ ವಂಚಿಸುತ್ತಿದ್ದಾರೆ. ಈ ಲಿಂಕ್ ಕ್ಲಿಕ್ ಮಾಡಿದರೆ, ನಿಮ್ಮ ಮೊಬೈಲ್‌ಗೆ ಮಾಲ್‌ವೇರ್ ಸೇರಿ ಬ್ಯಾಂಕ್ ಖಾತೆಯಲ್ಲಿನ ಹಣ ಸಂಪೂರ್ಣ ಖಾಲಿಯಾಗುವ ಅಪಾಯವಿದೆ.
ಇತ್ತೀಚಿನ ದಿನಗಳಲ್ಲಿ ಮೊಬೈಲ್‌ಗಳಿಗೆ ಅನಾಮಧೇಯ ಸಂಖ್ಯೆಗಳಿಂದ ಹಲವು ವಿಡಿಯೋಗಳು ಬರುತ್ತಿರುತ್ತವೆ.
ಕೆಲವು ವಿಡಿಯೋಗಳು ಎಷ್ಟು ಇಂಟರೆಸ್ಟಿಂಗ್ ಆಗಿರುತ್ತವೆ ಅಂದ್ರೆ, ನಾವು ಒಂದು ಕ್ಷಣವೂ ಯೋಚನೆ ಮಾಡದೇ ಕ್ಲಿಕ್ ಮಾಡುತ್ತವೆ. ಸೈಬರ್ ಕಳ್ಳರು ಇದನ್ನೇ ಲಾಭವನ್ನಾಗಿ ಮಾಡಿಕೊಂಡು ನಿಮ್ಮನ್ನು ಮೋಸಗೊಳಿಸುತ್ತಾರೆ. ಕೇವಲ 2 ನಿಮಿಷದ ವಿಡಿಯೋವೊಂದು ನೀವು ಕಷ್ಟಪಟ್ಟು ದುಡಿದ ಹಣವನ್ನು ಕೆಲವೇ ನಿಮಿಷಗಳಲ್ಲಿ ಖಾಲಿ ಮಾಡಬಹುದು. ನಿಮ್ಮ ಬ್ಯಾಂಕ್ ಖಾತೆಯೇ ಕ್ಲೀನ್ ಆಗಬಹುದು.

ಸೈಬರ್ ತಜ್ಞರ ಪ್ರಕಾರ, ಇತ್ತೀಚೆಗೆ 2 ನಿಮಿಷದ ವಿಡಿಯೋ ಲಿಂಕ್‌ಗಳನ್ನು ಫಾರ್ವರ್ಡ್ ಮಾಡಲಾಗುತ್ತಿದೆ. ವಿಡಿಯೋ ನೆಪದಲ್ಲಿ ಬಳಕೆದಾರರ ಮೊಬೈಲ್‌ನಲ್ಲಿ ಮಾಲ್‌ವೇರ್, ಫೇಕ್ ಆಯಪ್ ಅಥವಾ ಅಪಾಯಕಾರಿ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಸಲಾಗುತ್ತದೆ. ಹಲವು ಪ್ರಕರಣಗಳಲ್ಲಿ ಜನರ ಬ್ಯಾಂಕ್ ಅಕೌಂಟ್‌ಗಳೆಲ್ಲಾ ಖಾಲಿಯಾಗಿವೆ. ನಿಮ್ಮ ಮೊಬೈಲ್‌ಗೂ ಈ ತರಹದ ಅನುಮಾನಾಸ್ಪದ ವಿಡಿಯೋ ಬಂದ್ರೆ, ಅವುಗಳಿಂದ ಹೇಗೆ ಬಚಾವ್ ಆಗಬೇಕು ಎಂಬುದರ ಮಾಹಿತಿ ಇಲ್ಲಿದೆ.

ಈ ಸ್ಕ್ಯಾಮ್‌ನಲ್ಲಿ ಸೈಬರ್ ಕಳ್ಳರು ನಿಮಗೆ ವಾಟ್ಸಾಪ್ (WhatsApp), ಟೆಲಿಗ್ರಾಂ (Telegram), ಫೇಸ್‌ಬುಕ್ (Facebook), ಇನ್‌ಸ್ಟಾಗ್ರಾಂ (Instagram) ಅಥವಾ SMS ಮೂಲಕ ಒಂದು ವಿಡಿಯೋ ಲಿಂಕ್ ಕಳಿಸ್ತಾರೆ. ಆ ಮೆಸೇಜ್‌ನಲ್ಲಿ, ನಿಮ್ಮ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನೀವಿದ್ದೀರಿ. ನೋಡಿ, ನಿಮ್ಮ ಬಗ್ಗೆ ಯಾರು ಏನ್ ಮಾತಾಡ್ತಿದ್ದಾರೆ. 2 ನಿಮಿಷದ ವಿಡಿಯೋ, ಪೂರ್ತಿ ಸತ್ಯ ತಿಳಿಯಿರಿ ಎಂಬ ಸಾಲುಗಳೊಂದಿಗೆ ಲಿಂಕ್ ಕಳುಹಿಸಲಾಗುತ್ತದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡ್ತಿದಂತೆ ಕೆಲ ಆಪ್‌ಗಳನ್ನು ನಿಮ್ಮ ಪೇಜ್‌ಗೆ ಕಳುಹಿಸಿ ಡೌನ್‌ಲೋಡ್ ಮಾಡಲಾಗುತ್ತದೆ. ಇಲ್ಲಿಂದ ಸೈಬರ್ ಕಳ್ಳರ ಅಸಲಿ ಆಟ ಶುರುವಾಗತ್ತದೆ.
ವಾಟ್ಸಾಪ್ ಬಳಕೆದಾರರು, ಆನ್‌ಲೈನ್ ಬ್ಯಾಂಕಿಂಗ್ ಮಾಡುವವರು, ಯುಪಿಐ ಬಳಸುವ ಗ್ರಾಹಕರು, ಹಿರಿಯ ನಾಗರಿಕರು, ಹೊಸದಾಗಿ ಸ್ಮಾರ್ಟ್‌ಫೋನ್ ಬಳಸುವವರು

1. ಫೇಕ್ ಆಯಪ್ ಇನ್‌ಸ್ಟಾಲ್ ಮಾಡಿಸೋದು
ವಿಡಿಯೋ ನೋಡೋಕೆ ಅಂತ ಹೇಳಿ, ಒಂದು APK ಫೈಲ್ ಡೌನ್‌ಲೋಡ್ ಮಾಡಿಸ್ತಾರೆ. ಆ ಆಯಪ್ ಇನ್‌ಸ್ಟಾಲ್ ಆದ ತಕ್ಷಣ, ಅದು ನಿಮ್ಮ ಮೊಬೈಲ್‌ನ ಕಂಟ್ರೋಲ್ ತೆಗೆದುಕೊಳ್ಳೋಕೆ ಪ್ರಯತ್ನಿಸುತ್ತೆ.
2. OTP ಮತ್ತು SMS ಕದಿಯೋದು
ಕೆಲವು ಮಾಲ್‌ವೇರ್‌ಗಳು ನಿಮ್ಮ ಫೋನ್‌ನಲ್ಲಿರೋ SMS ಓದಬಲ್ಲವು. ಇದರಿಂದ ಬ್ಯಾಂಕ್ OTP ಮತ್ತು ವೆರಿಫಿಕೇಶನ್ ಕೋಡ್‌ಗಳನ್ನು ಕದಿಯಬಹುದು.

3. UPI ಮಾಹಿತಿ ಕದಿಯೋದು
ಫೇಕ್ ಪೇಜ್‌ನಲ್ಲಿ ನಿಮ್ಮ UPI ಪಿನ್, ಬ್ಯಾಂಕ್ ಡೀಟೇಲ್ಸ್ ಅಥವಾ ಕಾರ್ಡ್ ಮಾಹಿತಿ ತುಂಬುವಂತೆ ಮಾಡ್ತಾರೆ.
4. ಸ್ಕ್ರೀನ್ ಶೇರ್ ಮಾಡಿಸೋದು
ಹಲವು ಬಾರಿ, ವಿಡಿಯೋ ಓಪನ್ ಆಗ್ತಿಲ್ಲ ಅಂತ ಸುಳ್ಳು ಹೇಳಿ AnyDesk, TeamViewer ಅಥವಾ ಬೇರೆ ರಿಮೋಟ್ ಆಕ್ಸೆಸ್ ಆಯಪ್ ಡೌನ್‌ಲೋಡ್ ಮಾಡೋಕೆ ಹೇಳ್ತಾರೆ. ಇದಾದ ಮೇಲೆ, ಕಳ್ಳರು ನಿಮ್ಮ ಮೊಬೈಲ್ ಸ್ಕ್ರೀನ್ ನೋಡಬಹುದು.

ಲಿಂಕ್ ಅಪರಿಚಿತ ನಂಬರ್‌ನಿಂದ ಬಂದಿರುತ್ತೆ. ವೆಬ್‌ಸೈಟ್ ಹೆಸರು ವಿಚಿತ್ರವಾಗಿರುತ್ತದೆ. ವಿಡಿಯೋ ನೋಡೋಕೆ ಆಯಪ್ ಡೌನ್‌ಲೋಡ್ ಮಾಡಿ ಅಂದ್ರೆ ನೀವು ಅಲರ್ಟ್ ಆಗಬೇಕು. ಈಗಲೇ ನೋಡಿ, ಸೀಕ್ರೆಟ್ ವಿಡಿಯೋ, ವೈರಲ್ ಕ್ಲಿಪ್ ಈ ರೀತಿಯ ಪದಗಳಿದ್ರೆ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ.

