ಕುಂಬಳೆ: ಕುಂಬಳೆ ಠಾನೆ ಪೆÇಲೀಸರು ನಡೆಸಿದ ಸಿನಿಮೀಯ ಶೈಲಿಯ ಕಾರ್ಯಾಚರಣೆಯಲ್ಲಿ ಮಾರಕ 3.355 ಗ್ರಾಂ ಎಂಡಿಎಂಎ ಮಾದಕವಸ್ತು ವಶಪಡಿಸಿಕೊಂಡು, ಮೂವರನ್ನು ಬಂಧಿಸಿದ್ದಾರೆ.
ಮಂಗಲ್ಪಾಡಿ ಅಡ್ಕ ಹೌಸ್ ನಿವಾಸಿ ಅಬ್ದುಲ್ ಅಜೀಸ್(42), ನೆಕ್ರಾಜೆ ಅಲಂಗೋಲ್ ಹೌಸ್ ನಿವಾಸಿ ಅಬುಬಕ್ಕರ್ ಕೆ.ವಿ (32), ಮೋಗ್ರಾಲ್‍ನ ಮುಸ್ತಫಾ (44) ಬಂಧಿತರು. ವ ಕುಂಬಳೆ ಪೆÇಲೀಸ್ ಠಾಣೆ ಎಸ್‍ಐ ಅನೂಪ್ ನೇತೃತ್ವದ ಪೆÇಲೀಸರ ತಂಡ ಮಂಗಳವಾರ ರಾತ್ರಿ ಮಂಗಲ್ಪಾಡಿ ಅಡ್ಕ ರಸ್ತೆ ರೋಯಲ್ ಸ್ಟ್ರೀಟ್‍ನಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಆ ದಾರಿಯಾಗಿ ಆಗಮಿಸಿದ ಕಾರಿಗೆ ಸೂಚನೆ ನೀಡಿದರೂ, ನಿಲ್ಲಿಸದೆ ಪರಾರಿಯಾಗಲೆತ್ನಿಸಿದಾಗ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಹಿಂಬಾಲಿಸುತ್ತಿದ್ದಂತೆ ಕಾರಿನ ಚಕ್ರ ಹೊಂಡದಲ್ಲಿ ಹೂತುಕೊಂಡಿದೆ. ತಕ್ಷಣ ಪೊಲೀಸರು ಕಾರನ್ನು ಸುತ್ತುವರಿದು ಅದರಲ್ಲಿದ್ದ ಮೂವರು ಆರೋಪಿಗಳನ್ನು ತಪಾಸಣೆಗೊಳಪಡಿಸಿದಾಗ ಎಂಡಿಎಂಎ ಪತ್ತೆಯಾಗಿದೆ. ಸಾಗಾಟಕ್ಕೆ ಬಳಸಿದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಹೆಚ್ಚುವರಿ ಎಸ್‍ಐ ಸಂತೋಷ್ ವಿ.ವಿ, ಸೀನಿಯರ್ ಸಿವಿಲ್ ಪೆÇಲೀಸ್ ಆಫೀಸರ್ ಸಲೀಂದಾಸ್ ಮತ್ತು ಚಾಲಕ ಜಾಬೀರ್‍ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.


