ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯ ಅಡುಗೆ ಕೊಠಡಿಯೊಳಗೆ ಮಹಿಳೆಯೊಬ್ಬರ ಮೃತದೇಹ ಸುಟ್ಟು ಕರಕಲಾಗದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಶಿಮಠ ಗುಡ್ಡೆಯ ಡಿ. ಯೋಗೀಶ್ ಪ್ರಭು ಅವರ ಪತ್ನಿ ಸಾವಿತ್ರಿ ಪ್ರಭು (65) ಮೃತಪಟ್ಟವರು.
ಮಂಗಳವಾರ ರಾತ್ರಿ ಎಂದಿನಂತೆ ಊಟ ಮಾಡಿ ಸಾವಿತ್ರಿ ಹಾಗೂ ಅವರ ಪುತ್ರ ಗುರುಪ್ರಸಾದ್ ಪ್ರಭು ಮಲಗಿದ್ದರು. ಇಂದು ಬೆಳಿಗ್ಗೆ ಎದ್ದು ನೋಡಿದಾಗ ಅಡುಗೆಮನೆಯಲ್ಲಿ ಸಾವಿತ್ರಿಯವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಡುಗೆಮನೆಯಲ್ಲಿದ್ದ ಫೈಬರ್ ಕುರ್ಚಿಯ ಮೇಲೆ ಕುಳಿತುಕೊಂಡು ಮನೆಯಲ್ಲಿದ್ದ ಸೀಮೆಎಣ್ಣೆಯನ್ನು ಮೈಮೇಲೆ ಸುರಿದು ಬೆಂಕಿ ಹಚ್ಚಿಕೊಂಡಿರಬಹುದು ಎಂದು ಪೆÇಲೀಸರು ಶಂಕಿಸಿದ್ದಾರೆ. ಬೆಂಕಿಯ ತೀವ್ರತೆಗೆ ಕುರ್ಚಿ ಕರಗಿ ಮೃತದೇಹಕ್ಕೆ ಅಂಟಿಕೊಂಡ ಸ್ಥಿತಿಯಲಲಿ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಠಾಣೆ ಪೆÇಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕೆಟ್ಟುಹೋಗಿದ್ದ ಟಿವಿ ದುರಸ್ತಿಗಾಗಿ ಅಂಗಡಿಗೆ ಕೊಂಡೊಯ್ಯಲಾಗಿದ್ದು, ಮನೆಯಲ್ಲಿ ಟಿವಿ ಇಲ್ಲದಿರುವ ಚಿಂತೆ ಇವರನ್ನು ಕಾಡುತ್ತಿತ್ತು ಎಂದು ಇವರ ಪುತ್ರ ತಿಳಿಸಿದ್ದಾರೆ.


