ಕಾಸರಗೋಡು: ಸಕಾಲದಲ್ಲಿ ವಿದ್ಯುತ್ ಬಿಲ್ ಪಾವತಿಸದ ಗ್ರಾಹಕರೊಬ್ಬರ ವಿದ್ಯುತ್ ಸಂಪರ್ಕ ವಿಚ್ಚೇದಿಸಿದ ಅದೇದಿನ ಮನೆಯೊಳಗೆ ಸೇರಿಕೊಂಡಿದ್ದ ವಿಷಪೂರಿತ ಹಾವು ಕಡಿದ ಪರಿಣಾಮ ಮಹಿಳೆಯನ್ನು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇಲ್ಪರಂಬ ನಿವಾಸಿ 43ರ ಹರೆಯದ ಮಹಿಳೆಗೆ ಹಾವು ಕಚ್ಚಿದ್ದು, ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಕಳೆದ ಆರು ತಿಂಗಳಿಂದ ಮೇಲ್ಪಂಬದ ಬಾಡಿಗೆ ಕ್ವಾರ್ಟರ್ಸ್‍ನಲ್ಲಿ ವಾಸಿಸುತ್ತಿದ್ದರು. ಇವರಿಗೆ ದಿನಗಳ ಹಿಂದೆ ವಿದ್ಯುತ್ ಬಿಲ್ ನೀಡಲಾಗಿತ್ತು. ಆದರೆ ಮೊತ್ತ ಹೆಚ್ಚಾಗಿದ್ದರಿಂದ ಅದನ್ನು ಸಕಾಲದಲ್ಲಿ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ವಿದ್ಯುತ್ ಕಚೇರಿಯ ಸಿಬ್ಬಂದಿ ಕ್ವಾಟ್ರಸ್‍ಗೆ ಆಗಮಿಸಿ ವಿದ್ಯುತ್ ಫ್ಯೂಸ್ ತೆರವುಗೊಳಿಸಿ ವಿದ್ಯುತ್ ಸಂಪರ್ಕ ವಿಚ್ಛೇದಿಸಿದ್ದರು. ಅದೇ ದಿನ ರಾತ್ರಿ ಕ್ವಾಟ್ರಸ್‍ನ ಅಡುಗೆ ಕೋಣೆಯೊಳಗಿಂದ ಮಹಿಳೆಗೆ ವಿಷಪೂರಿತ ಹಾವು ಕಡಿದಿತ್ತು.

