ಕಾಸರಗೋಡು: ವಿವಾಹ ವಿಚ್ಛೇದನ ಪ್ರಕರಣ ದಾಖಲಿಸಿದ ದ್ವೇಷದಿಂದ ಪತ್ನಿ ಹಾಗೂ ಅತ್ತೆ ದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿಹಚ್ಚುವ ಮಧ್ಯೆ ಸ್ವತ: ತನ್ನ ಮೈಗೆ ಪೆಟ್ರೋಲ್ ಬಿದ್ದು, ಬೆಂಕಿ ತಗುಲಿದದ ಪರಿಣಾಮ ಗಂಭೀರಾಸ್ಥೆಯಲ್ಲಿದ್ದ ಯುವಕ ಸಾವಿಗೀಡಾಗಿದ್ದಾನೆ.
ಕರಿವೆಳ್ಳೂರು ಕೊಳಮ್ಮಲ್ ವರಿಕ್ಕರ ನಿವಾಸಿ, ಆಟೋ ಚಾಲಕ ಸಿ. ವಿ ಸನಲ್ ಕುಮಾರ್(46)ಸಾವಿಗೀಡಾದ ಯುವಕ. ಸನಲ್ ಕುಮಾರ್ ಮತ್ತು ಪತ್ನಿ ನಡುವೆ ದಾಂಪತ್ಯ ವಿರಸವುಂಟಾಗಿದ್ದ ಹಿನ್ನೆಲೆಯಲ್ಲಿಇವರ ಪತ್ನಿ ಪ್ರಕರಣ ದಾಖಲಿಸಿದ್ದರು. ಈ ಸಿಟ್ಟಿನಲ್ಲಿ ಕರಿವೆಳಳೂರು ಕೂಕಾನಂ ಶ್ರೀಮುತ್ತಪ್ಪನ್ ಕಷೇತ್ರ ಸನಿಹದ ಪತ್ನಿಯ ತವರು ಮನೆಗೆ ತೆರಳಿ ಪತ್ನಿ ಪ್ರಜೀಶಾ ಹಾಗೂ ಆಕೆ ತಾಯಿ ಪದ್ಮಿನಿ ಶರೀರಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲೆತ್ನಿಸುತ್ತಿದ್ದಂತೆ ಪೆಟ್ರೋಲ್ ತನ್ನ ಮೈಮೇಲೆ ಬಿದ್ದು, ಬೆಂಕಿ ಆವರಿಸಿಕೊಂಡಿದೆ. ತಕ್ಷಣ ಅಲ್ಲಿಂದ ಹೊರಕ್ಕೆ ಧಾವಿಸಿ ಹಿತ್ತಿಲೊಂದರಲ್ಲಿ ಬಿದ್ದಿದ್ದ ಈತನನ್ನು ಪೊಲೀಸರು ಆಗಮಿಸಿ ಆಸ್ಪತ್ರೆಗೆ ದಾಖಲಿಸಿದ್ದರು.

