ಕಾಸರಗೋಡು: ಹೆಚ್ಚಿನ ಲಾಭದ ಆಮಿಷವೊಡ್ಡಿ, ಆನ್‍ಲೈನ್ ಮೂಲಕ 17.31 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ವೃದ್ಧರೊಬ್ಬರು ನೀಡಿದ ದೂರಿನಂತೆ ಕಾಸರಗೋಡು ಸೈಬರ್ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪಡನ್ನ ಕಡಪ್ಪುರ ನಿವಾಸಿ ನೀಡಿದ ದೂರಿನನ್ವಯ ಈ ಪ್ರಕರಣ ದಾಖಲಾಗಿದೆ. ವಂಚಕರು ಇನ್‍ಸ್ಟಾಗ್ರಾಮ್, ವಾಟ್ಸಾಪ್ ಇತ್ಯಾದಿ ಸಾಮಾಜಿಕ ಮಾಧ್ಯಮಗಳ ಮೂಲಕ ನನ್ನನ್ನು ಪರಿಚಯಿಸಿಕೊಂಡು ಶೇರ್ ಮಾರ್ಕೆಟ್‍ನಲ್ಲಿ ಹಣ ಹೂಡಿದಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ಭರವಸೆ ನಿಡಿದ್ದರು, ಅಲ್ಲದೆ ಈ ಬಗ್ಗೆ ಆನ್‍ಲೈನ್ ಮೂಲಕ ತರಗತಿಯನ್ನು ನಡೆಸಿದರು.
ನಂತರ ಜಿ.ಬಿ. ಆನ್‍ಲೈನ್ ಅಪ್ಲಿಕೇಶನ್ ಮೂಲಕ ಶೇರ್ ಟ್ರೇಡಿಂಗ್ ಹೆಸರಲ್ಲಿ ವಂಚಕರು ನನ್ನ ಬ್ಯಾಂಕ್ ಖಾತೆಯಿಂದ ಜೂನ್ 22ರಿಂದ ಆಗಸ್ಟ್ 12ರ ನಡುವಿನ ವಿವಿಧ ದಿನಾಂಕಗಳಲ್ಲಿ ಒಟ್ಟು 17.31 ಲಕ್ಷ ರೂ. ಪಡೆದುಕೊಮಡಿದ್ದರು. ನಂತರ ಲಾಭದ ಮೊತ್ತವನ್ನು ನೀಡಿ, ಅಸಲು ಹಣವನ್ನು ಹಿಂತಿರುಗಿಸದೆ ವಂಚಿಸಿರುವುದಾಗಿ ಸೈಬರ್ ಪೆÇಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ದೂರದಾರ ಆರೋಪಿಸಿದ್ದಾರೆ.

