HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಶೀಘ್ರ ಪೆಟ್ರೋಲ್, ರಿಯಲ್ ಎಸ್ಟೇಟ್ ಕೂಡ ಜಿಎಸ್ ಟಿ ವ್ಯಾಪ್ತಿಗೆ: ಸುಶೀಲ್ ಮೋದಿ
           ಎಫ್ಐಸಿಸಿಐ ವಾಷರ್ಿಕ ಸಮಾವೇಶದಲ್ಲಿ ಸುಶೀಲ್ ಮೋದಿ ಹೇಳಿ
   ನವದೆಹಲಿ: ಮಂಡಳಿಯು ಭವಿಷ್ಯದಲ್ಲಿ ವಿದ್ಯುತ್, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಿಯಲ್ ಎಸ್ಟೇಟ್ ಅನ್ನು ಕೂಡ ಜಿಎಸ್ ಟಿ ವ್ಯಾಪ್ತಿಗೆ ತರಲಿದೆ ಎಂದು ಬಿಹಾರದ ಹಣಕಾಸು ಸಚಿವ ಸುಶೀಲ್ ಮೋದಿ ಗುರುವಾರ ಹೇಳಿದರು.
    ಉದ್ಯಮ ವಲಯದ ಪ್ರಾತಿನಿಧಿಕ ಮಂಡಳಿ ಎಫ್ ಐಸಿಸಿಐ ವಾಷರ್ಿಕ ಸಮಾವೇಶದಲ್ಲಿ ಗುರುವಾರ ಮಾತನಾಡಿದ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರು, ಜಿಎಸ್ ಟಿ ಮಂಡಳಿಯು ಭವಿಷ್ಯದಲ್ಲಿ ವಿದ್ಯುತ್,  ಪೆಟ್ರೋಲಿಯಂ ಉತ್ಪನ್ನಗಳು, ಸ್ಟ್ಯಾಂಪ್ ಡ್ಯೂಟಿ ಮತ್ತು ರಿಯಲ್ ಎಸ್ಟೇಟ್ ಅನ್ನು ಕೂಡ ಜಿಎಸ್ ಟಿ ಒಳಪಡಿಸಲಿದೆ. ಆದರೆ ಇದಕ್ಕಾಗಿ ನಿದರ್ಿಷ್ಟ ಕಾಲಮಿತಿ ನಿಗದಿಪಡಿಸುವುದು ಕಷ್ಟಕರ. ಆದರೆ ಭವಿಷ್ಯದಲ್ಲಿ ಇದು ಸಾಧ್ಯವಾಗಲಿದೆ  ಎಂದು ಹೇಳಿದರು.
     ಅಂತೆಯೇ ಒಂದು ವೇಳೆ ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್ ಟಿ ವ್ಯಾಪ್ತಿಗೆ ಬಂದರೆ, ಜಿಎಸ್ ಟಿ ಯಡಿಯಲ್ಲಿನ ಗರಿಷ್ಠ ತೆರಿಗೆಯ ಶ್ರೇಣಿಗೆ ಬರುವ ಸಾಧ್ಯತೆ ಇದೆ. ಪ್ರಸ್ತತು ಕೇಂದ್ರ ಸಕರ್ಾರ ಶೇ.40ರಷ್ಟು ಆಧಾಯವನ್ನು  ಪೆಟ್ರೋಲಿಯಂ ಉತ್ಪನ್ನದಳ ಮೇಲಿನ ಆದಾಯದಿಂದಲೇ ಪಡೆಯುತ್ತಿದೆ ಎಂದು ಹೇಳಿದರು. ಅಂತೆಯೇ ರಾಜ್ಯಗಳೂ ತಮ್ಮ ಆದಾಯವನ್ನು ರಕ್ಷಿಸಿಕೊಳ್ಳಲು ಮೇಲ್ತೆರಿಗೆ ವಿಧಿಸಲು ಅವಕಾಶ ನೀಡುವ ನಿರೀಕ್ಷೆ ಇದೆ ಎಂದರು. ಇನ್ನು  ಸದ್ಯಕ್ಕೆ ಜಿಎಸ್ಟಿಯಲ್ಲಿ ಶೇ.5, ಶೇ.12, ಶೇ.18, ಶೇ.28 ಎಂಬ ತೆರಿಗೆ ಶ್ರೇಣಿಯಿದ್ದು, ಜಿಎಸ್ಟಿಯಿಂದ ವಿನಾಯಿತಿ ನೀಡಿರುವ ಹಲವಾರು ವಸ್ತುಗಳೂ ಕೂಡ ಇವೆ. ಜಿಎಸ್ಟಿ ಯಡಿಯಲ್ಲಿ ಶೇ.28ರ ತೆರಿಗೆಯ ಬದಲಿಗೆ ಶೇ.25  ಗರಿಷ್ಠ ತೆರಿಗೆ ಶ್ರೇಣಿಯಾಗಿ ಇಳಿಕೆಯಾಗುವ ಸಾಧ್ಯತೆ ಇದೆ ಎಂಬ ಸುಳಿವನ್ನೂ ಸುಶೀಲ್ ಮೋದಿ ಕೊಟ್ಟಿದ್ದಾರೆ.
   ಇನ್ಫೋಸಿಸ್ ತಯಾರಿಸಿದ ಸಾಫ್ಟ್ ವೇರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಜಿಎಸ್ ಟಿ ಅನುಷ್ಠಾನ ಕುರಿತ ಸಾಫ್ಟ್ವೇರ್ ಸಿದ್ಧಪಡಿಸಿರುವ ಇನ್ಫೋಸಿಸ್ ಸಂಸ್ಥೆ  ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ನಾವು ಉತ್ತಮ ಕಂಪನಿಯನ್ನೇ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಸಮರ್ಥನೆ ನೀಡಿದರು. ಅಂತೆಯೇ ಜಿಎಸ್ ಟಿ ಕುರಿತ ಸಾಫ್ಟ್ ವೇರ್ ಸಂಬಂಧಿತ ಸಮಸ್ಯೆಗಳೂ ಶೀಘ್ರ ಬಗೆಹರಿಯಲಿದೆ  ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries