ಭಾರತೀಯ ಸೇನೆಯನ್ನು ಉದ್ಯೋಗ ನೀಡುವ ಸಂಸ್ಥೆಯಾಗಿ ನೋಡಬೇಡಿ: ಬಿಪಿನ್ ರಾವತ್
0
ಡಿಸೆಂಬರ್ 13, 2018
ಪುಣೆ: ಭಾರತೀಯ ಸೇನೆಯನ್ನು ಉದ್ಯೋಗ ನೀಡುವ ಒಂದು ಸಂಸ್ಥೆಯಾಗಿ ನೋಡಬೇಡಿ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಗುರುವಾರ ಹೇಳಿದರು.
ಗಡಿಯಲ್ಲಿ ಕರ್ತವ್ಯದ ವೇಳೆ ನಿಜಕ್ಕೂ ಅಂಗವೈಕಲ್ಯಕ್ಕೆ ಒಳಗಾದ ಸೈನಿಕರಿಗೆ ಹಾಗೂ ಮಾಜಿ ಸೈನಿಕರಿಗೆ ಎಲ್ಲಾ ರೀತಿಯ ಸಹಾಯದ ಭರವಸೆ ನೀಡಿದ ರಾವತ್, ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಅಥವಾ ಸೌಲಭ್ಯ ಪಡೆಯಲು ಅನಾರೋಗ್ಯ ಅಥವಾ ಅಂಗವೈಕಲ್ಯದ ನೆಪ ಹೇಳಬೇಡಿ ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.
ಜನರು ಇತ್ತೀಚಿಗೆ ಭಾರತೀಯ ಸೇನೆ ಉದ್ಯೋಗ ನೀಡುವ ಒಂದು ಸಂಸ್ಥೆ ಎಂದು ಭಾವಿಸುತ್ತಿರುವುದಾಗಿ ರಾವತ್ ತಿಳಿಸಿದರು.


