ಬದಿಯಡ್ಕ: ಕಲಾಮಾತೆಯ ಅನುಗ್ರಹವನ್ನು ಪಡೆದ ಅನೇಕ ಪ್ರತಿಭಾನ್ವಿತ ಕಲಾವಿದರನ್ನು ಗೌರವಿಸುವ ಮೂಲಕ ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡು ವಾಟ್ಸಪ್ ಬಳಗದ ನೇತೃತ್ವದಲ್ಲಿ ನಡೆದ ವಿಶ್ವದರ್ಶನ 2019 ದ್ವಿದಿನ ಸಮ್ಮೇಳನವು ಕೇವಲ ಮಾತಿನ ವೇದಿಕೆಯಾಗದೆ ಜನಮಾನಸದಲ್ಲಿ ನೆಲೆಯೂರುವಂತೆ ಭಾನುವಾರ ಸಂಜೆ ಸಮಾರೋಪಗೊಂಡಿತು.
ಬದಿಯಡ್ಕ ಗ್ರಾಂಡ್ ಪ್ಲಾಝಾ ಆಡಿಟೋರಿಯಂನಲ್ಲಿ ಸಂಜೆ ನಡೆದ ಪುರಸ್ಕಾರ ಪ್ರಧಾನ ಸಮಾರಂಭದಲ್ಲಿ ವಿವಿಧ ಕೃತಿಕಾರರಿಗೆ `ಪುಸ್ತಕ ಪುರಸ್ಕಾರ', `ಬಾಲ-ಯುವ ಪ್ರತಿಭಾ ಪುರಸ್ಕಾರ', ಒಂದೇ ರಂಗದಲ್ಲಿ ಅಪೂರ್ವ ಸಾಧನೆಗೈದವರಿಗಾಗಿ `ಬಹುಮುಖ ಪ್ರತಿಭಾ ಪುರಸ್ಕಾರ' ಅಲ್ಲದೆ ಪತಿ ಪತ್ನಿಯರು ಒಂದೇ ಕ್ಷೇತ್ರದಲ್ಲಿ ಸಲ್ಲಿಸುವ ಸೇವೆಗಾಗಿ `ಅಪೂರ್ವ ದಂಪತಿ ಪುರಸ್ಕಾರ'ವನ್ನು ಪ್ರಧಾನಗೈಯಲಾಯಿತು.
ಸಮ್ಮೇಳನದ ಸರ್ವಾಧ್ಯಕ್ಷ ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಪುಸ್ತಕ ಪ್ರಶಸ್ತಿ ಪುರಸ್ಕøತ ಗಣೇಶ್ ಕಾಸರಗೋಡು ಅಧ್ಯಕ್ಷತೆಯನ್ನು ವಹಿಸಿದ್ದರು. ಬ್ರಹ್ಮಶ್ರೀ ವೇದಪ್ರವೀಣ ಪುರಸ್ಕøತ ತಂತ್ರಿವರ್ಯ ಪುರೋಹಿತರತ್ನ ಬಿ.ಕೇಶವ ಆಚಾರ್ಯ ಉಳಿಯತ್ತಡ್ಕ, ಬ್ರಹ್ಮಶ್ರೀ ಉಮೇಶ್ ತಂತ್ರಿ ಕೊಟ್ಟಾರ ಚೌಕಿ, ಮಧೂರು ಕಾಳಿಕಾಂಬಾ ಮಠಧ ಅಧ್ಯಕ್ಷ ಎನ್. ಪರಮೇಶ್ವರ ಆಚಾರ್ಯ ನೀರ್ಚಾಲು, ಆರಿಕ್ಕಾಡಿ ಶ್ರೀ ಕಾಳಿಕಾಂಬ ಮಠದ ಅಧ್ಯಕ್ಷ ಸುಧಾಕರ ಆಚಾರ್ಯ ಎಡನೀರು, ಬಂಗ್ರಮಂಜೇಶ್ವರ ಶ್ರೀ ಕಾಳಿಕಾಂಬ ಮಠದ ಅಧ್ಯಕ್ಷ ಪೋಳ್ಯ ಉಮೇಶ್ ಆಚಾರ್ಯ, ಕೋಟೆಕ್ಕಾರು ನೆಲ್ಲಿಸ್ಥಳ ಶ್ರೀಕಾಳಿಕಾಂಬ ಮಠದ ಸುಂದರ ಆಚಾರ್ಯ ನಡುಮನೆ, ಶ್ರೀಮದ್ ಆನೆಗುಂದಿ ಶ್ರೀ ಸದ್ಗುರು ಸರಸ್ವತೀ ಪೀಠ ಪ್ರತಿಷ್ಠಾನ ಕಟಪಾಡಿಯ ಕಾರ್ಯದರ್ಶಿ ನ್ಯಾಯವಾದಿ ಗಂಗಾಧರ ಆಚಾರ್ಯ ಕೊಂಡೆವೂರು, ಮಧೂರು ಗ್ರಾಮಪಂಚಾಯತ್ ಉಪಾಧ್ಯಕ್ಷ ದಿವಾಕರ ಆಚಾರ್ಯ ಅಡ್ಕ, ನಿವೃತ್ತ ಶಿರಸ್ತೇದಾರ್ ನ್ಯಾಯವಾದಿ ಪ್ರಭಾಕರ ಆಚಾರ್ಯ ಬೀರಿ ಕೋಟೆಕ್ಕಾರು, ನಿವೃತ್ತ ಶಿಕ್ಷಕಿ ಪ್ರೇಮಲತಾ ಮೋಹನದಾಸ ಆಚಾರ್ಯ ಕೋಟೆಕ್ಕಾರು, ಕಾಸರಗೋಡುವಿಶ್ವಕರ್ಮ ಕಬ್ಬಿಣ ಕರಕುಶಲ ಕಾರ್ಮಿಕ ಸಂಘದ ಅಧ್ಯಕ್ಷ ರವೀಂದ್ರ ಆಚಾರ್ಯ ಮುಳ್ಳೇರಿಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪುರೋಹಿತ ರಾಮಕೃಷ್ಣ ಆಚಾರ್ಯ, ವಾಸುದೇವ ಆಚಾರ್ಯ ನೀರ್ಚಾಲು, ರವೀಂದ್ರ ಕೋಟೆಕ್ಕಾರು ಗೌರವ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ್ ಸಾನಗ ಸ್ವಾಗತಿಸಿ, ಅತಿಥಿ ಸತ್ಕಾರ ಸಮಿತಿ ಅಧ್ಯಕ್ಷ ದೇವರಾಜ ಆಚಾರ್ಯ ವಂದಿಸಿದರು. ಸನ್ಮಾನ ಸಮಿತಿ ಅಧ್ಯಕ್ಷೆ ಸಂಧ್ಯಾ ಅಂಡಿಂಜೆ, ವಿಶ್ವದರ್ಶನ ಸಾಹಿತ್ಯ ದರ್ಶನ ಬಳಗದ ಸ್ಥಾಪಕ ಜಯ ಮಣಿಯಂಪಾರೆ ನಿರೂಪಿಸಿದರು.
ಎರಡು ದಿನಗಳ ಸಮ್ಮೇಳನವು ವಿವಿಧ ಪ್ರತಿಭೆಗಳಿಗೆ ವೇದಿಕೆಯಾಯಿತು. ಚಿತ್ರಕಲಾ ಪ್ರದರ್ಶನ, ವಸ್ತುಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ಮಾರಾಟ, ಕರಕುಶಲ ವಸ್ತು ಪ್ರದರ್ಶನ, ವೈವಿಧ್ಯಮಯ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಅನಾವರಣಗೊಂಡಿತು.



