ಕಾಸರಗೋಡು: ಕಿನಾನೂರು ಕರಿಂದಳ ಪಂಚಾಯತಿಯ ಬೀರಿಕುಳಂ ಜನಪರ ಆರೋಗ್ಯ ಕೇಂದ್ರವು ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡಗಳ (ಎನ್.ಕ್ಯು.ಎ.ಎಸ್.) ಮಾನ್ಯತೆಯನ್ನು ಪಡೆದುಕೊಂಡಿದೆ. ಎನ್.ಕ್ಯು.ಎ.ಎಸ್. ಮಾನ್ಯತೆಯನ್ನು ಶೇಕಡಾ 90.05 ರಷ್ಟು ಅಂಕಗಳೊಂದಿಗೆ ಪಡೆದುಕೊಂಡಿದೆ. ಎನ್.ಕ್ಯು.ಎ.ಎಸ್. ಮಾನ್ಯತೆ ಮೂರು ವರ್ಷಗಳ ಸಿಂಧುತ್ವವನ್ನು ಹೊಂದಿದೆ. ಮೂರು ವರ್ಷಗಳ ನಂತರ ರಾಷ್ಟ್ರೀಯ ತಂಡದಿಂದ ಮರು ಪರೀಕ್ಷೆ ನಡೆಯಲಿದೆ. ಇದಲ್ಲದೆ, ರಾಜ್ಯ ಮಟ್ಟದ ತಪಾಸಣೆಯೂ ಇರುತ್ತದೆ. ಎನ್.ಕ್ಯು.ಎ.ಎಸ್ ಮಾನ್ಯತೆ ಪಡೆಯುವ ಸಾರ್ವಜನಿಕ ಆರೋಗ್ಯ ಕೇಂದ್ರಗಳು ಪ್ರತಿ ಪ್ಯಾಕೇಜ್‍ಗೆ ವಾರ್ಷಿಕ 18,000 ರೂ.ಗಳ ಪ್ರೋತ್ಸಾಹ ಧನವನ್ನು ಪಡೆಯುತ್ತವೆ. ಇದು ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಮತ್ತಷ್ಟು ಸಹಾಯ ಮಾಡುತ್ತದೆ.


