ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಮಾಡತ್ತಡ್ಕ ಶ್ರೀ ಹರಿಹರ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವ ಬುಧವಾರ ಬೆಳಗ್ಗೆ ಆರಂಭವಾಯಿತು. ಹಿರಿಯರಾದ ಗೋವಿಂದ ಭಟ್ ಮಿಂಚಿನಡ್ಕ ದೀಪಬೆಳಗಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಿತು. ಮಧ್ಯಾಹ್ನ ವೇಣುಮಾರಾರ್ ಮತ್ತು ಸಂಘ ಬಾಲುಶ್ಶೇರಿ ಕೋಝಿಕ್ಕೋಡು ಇವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವದ ಸಿದ್ಧತೆಗಳು, ಮಹಾಪೂಜೆ ನಡೆಯಿತು. ಅಯ್ಯಪ್ಪ ವ್ರತಧಾರಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.
ಈ ಸಂದರ್ಭ ಯಕ್ಷಾಭಿಮಾನಿಗಳ ಪ್ರಾಯೋಜಕತ್ವದಲ್ಲಿ ಯಕ್ಷಧ್ರ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಯಕ್ಷಗಾನವೈಭವ ಬುಧವಾರ ಮಧ್ಯಾಹ್ನ ನಡೆಯಿತು.



