HEALTH TIPS

ಆಸ್ಕರ್ 2019: ಭಾರತ ಕೇಂದ್ರಿತ 'ಪೀರ್ಯಡ್. ಎಂಡ್ ಆಫ್ ಸೆಂಟೆನ್ಸ್ ' ಕಿರು ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ!

ಲಾಸ್ ಏಂಜಲೀಸ್: ಗ್ರಾಮೀಣ ಭಾರತದ ಯುವತಿಯರು ಮತ್ತು ಮಹಿಳೆಯರ ಋತುಚಕ್ರದ ಮೇಲೆ ಬೆಳಕು ಚೆಲ್ಲುವ ಪಿರಡ್: ಅಂಡ್ ಆಫ್ ಸೆಂಟೆನ್ಸ್ ಈ ವರ್ಷದ ಆಸ್ಕರ್ ಪ್ರಶಸ್ತಿ ಆಯ್ಕೆಯಲ್ಲಿ ಉತ್ತಮ ಕಿರು ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಪ್ರಶಸ್ತಿ ವಿಜೇತೆ ಚಿತ್ರ ನಿರ್ದೇಶಕಿ ಇರಾನ್ ಅಮೆರಿಕಾ ಮೂಲದ ರೇಕಾ ಝೆತಾಬ್ಚಿ ಈ ಸಾಕ್ಷ್ಯ ಚಿತ್ರದ ನಿರ್ದೇಶಕಿ. ಚಿತ್ರವನ್ನು ನಿರ್ಮಿಸಿದವರು ಭಾರತ ಮೂಲದ ನಿರ್ಮಾಪಕ ಗುಣೀತ್ ಮೊಂಗ ಅವರ ನಿರ್ಮಾಣ ಸಂಸ್ಥೆ ಸಿಖ್ಯಾ ಎಂಟರ್ಟೈನ್ ಮೆಂಟ್. ಲಾಸ್ ಏಂಜಲೀಸ್ ನ ಒಕ್ ವೂಡ್ ಸ್ಕೂಲ್ ನ ವಿದ್ಯಾರ್ಥಿಗಳು ಮತ್ತು ಅವರ ಶಿಕ್ಷಕಿಯಾದ ಮೆಲಿಸ್ಸಾ ಬೆರ್ಟನ್ ಅವರು ಆರಂಭಿಸಿದ್ದ ದ ಪ್ಯಾಡ್ ಪ್ರಾಜೆಕ್ಟ್ ನ ಭಾಗವೇ ಈ ಸಾಕ್ಷ್ಯಚಿತ್ರವಾಗಿದೆ. ಲಾಸ್ ಏಂಜಲೀಸ್ ನಲ್ಲಿ ಭಾನುವಾರ ರಾತ್ರಿ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರ ಋತುಚಕ್ರದ ಮೇಲೆ ಮಾಡಿದ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಪ್ರಶಸ್ತಿಯನ್ನು ಅವರು ತಮ್ಮ ಶಾಲೆ, ಶಿಕ್ಷಕಿ ಬೆರ್ಟಾನ್ ಗೆ ಅರ್ಪಿಸಿದ್ದಾರೆ. ಈ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಿದ್ದು ದೆಹಲಿಯ ಹೊರವಲಯದ ಹಾಪುರ್ ಗ್ರಾಮದಲ್ಲಿ. ಈ ಗ್ರಾಮದಲ್ಲಿ ಬೇರೂರಿದ್ದ ಮೂಢನಂಬಿಕೆ, ಅಂಧಶ್ರದ್ಧೆ ವಿರುದ್ಧ ಹೋರಾಟದ ಮಹಿಳೆಯರು ಹೋರಾಟದ ಜೀವನ ನಡೆಸುತ್ತಿದ್ದರು. ದಶಕಗಳಿಂದ ಈ ಗ್ರಾಮದ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಗಳೇ ಲಭ್ಯವಾಗುತ್ತಿರಲಿಲ್ಲ, ಹಳೆಯ ಕಾಲದಲ್ಲಿ ಉಪಯೋಗಿಸುತ್ತಿದ್ದಂತೆ ಬಟ್ಟೆಗಳನ್ನೇ ಬಳಸುತ್ತಿದ್ದರು. ಇದರಿಂದ ಆ ಗ್ರಾಮದ ಅನೇಕ ಮಹಿಳೆಯರಲ್ಲಿ ಮತ್ತು ಯುವತಿಯರಲ್ಲಿ ಆರೋಗ್ಯ ಸಮಸ್ಯೆಯುಂಟಾಗುತ್ತಿತ್ತು. ಅನೇಕ ಮಕ್ಕಳು ಶಾಲೆಯಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಯಂತ್ರವನ್ನು ಗ್ರಾಮದಲ್ಲಿ ಸ್ಥಾಪಿಸಿದಾಗ ಮಹಿಳೆಯರು ಅದನ್ನು ಉತ್ಪಾದಿಸುವುದನ್ನು ಕಲಿತರು ಮತ್ತು ಅವರದ್ದೇ ಮಾರುಕಟ್ಟೆ ಸೃಷ್ಟಿಸಿ ಹಣ ಗಳಿಸಿ ತಮ್ಮ ಸಮುದಾಯಗಳ ಸಶಕ್ತೀಕರಣಕ್ಕೆ ಹೋರಾಟ ನಡೆಸುತ್ತಿದ್ದಾರೆ. ನಾವು ಗೆದ್ದೆವು, ಭೂಮಿ ಮೇಲಿರುವ ಎಲ್ಲಾ ಹುಡುಗಿಯರಿಗೆ ಈ ಪ್ರಶಸ್ತಿ ಅರ್ಪಣೆ ಎಂದು ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ ಗುಣೀತ್ ಮೊಂಗ ಇಂದು ಟ್ವೀಟ್ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಭಾರತ ದೇಶದಲ್ಲಿ ಯುವತಿಯರ ಋತುಚಕ್ರದ ಬಗ್ಗೆ ಜಾಗೃತಿಯುಂಟಾಗುತ್ತಿದೆ. ಇದು ಬಾಲಿವುಡ್ ಸೇರಿದಂತೆ ಅನೇಕ ಸ್ಥಳೀಯ ಭಾಷೆಗಳಲ್ಲಿ ಕೂಡ ತೋರಿಸಲಾಗಿದೆ. ಕಳೆದ ವರ್ಷ ಬಾಲಿವುಡ್ ನಲ್ಲಿ ಬಿಡುಗಡೆಯಾದ ಪ್ಯಾಡ್ ಮಾನ್ ಕಥೆ ಕೂಡ ಇದನ್ನೇ ಸಾರುತ್ತದೆ. 2009ರಲ್ಲಿ ಸ್ಲಂಡಾಗ್ ಮಿಲಿಯನೇರ್ ಚಿತ್ರದ ಸಂಗೀತ ನಿರ್ದೇಶನಕ್ಕೆ ಎ ಆರ್ ರೆಹಮಾನ್ ಮತ್ತು ರೆಸುಲ್ ಪೂಕುಟ್ಟಿ ಸ್ಲಮ್ ಡಾಗ ಅತ್ಯುತ್ತಮ ಧ್ವನಿ ತಂತ್ರಜ್ಞಾನಕ್ಕೆ ಆಸ್ಕರ್ ಪ್ರಶಸ್ತಿ ಗಳಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries