ಬುಟ್ಟಿ ಹೆಣೆಯುವ ಬಳ್ಳಿಯ ಸಸಿ ವಿತರಣೆಗೆ ಕೃಷಿ ಇಲಾಖೆಯ ಮಂಜೂರಾತಿ
0
ಫೆಬ್ರವರಿ 25, 2019
ಬದಿಯಡ್ಕ: ಜಿಲ್ಲಾಧಿಕಾರಿಗಳ ಜೀವನ ಮಾರ್ಗ ವಿತರಣೆ ಯೋಜನೆ ಪ್ರಕಾರ ರಾಜ್ಯ ಸರಕಾರದ ಒಂದು ಸಾವಿರ ದಿನ ಪೂರೈಸಿದ ಆಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮಗಳ ಅಂಗವಾಗಿ ಬದಿಯಡ್ಕ ಗ್ರಾಮಪಂಚಾಯತಿ ಮಾರತಡ್ಕ ಕೊರಗ, ಪರಿಶಿಷ್ಟ ಪಂಗಡ ಕಾಲನಿಗಳ 13 ಕುಟುಂಬಗಳಿಗೆ ಅವರ ಕುಲಕಸುಬಾಗಿರುವ ಬುಟ್ಟಿ ಇತ್ಯಾದಿ ಹೆಣೆಯುವ ನಿಟ್ಟಿನಲ್ಲಿ ಬೆದತ (ಪುಲ್ಲಾಂವಳ್ಳಿ) ಸಸಿಗಳ ವಿತರಣೆ ನಡೆಸುವ ಯೋಜನೆಗೆ ರಾಜ್ಯ ಹಾರ್ಟಿಕಲ್ಚರ್ ಮಿಷನ್ ಮಂಜೂರಾತಿ ನೀಡಿದೆ.
ಜಾರಿಯಲ್ಲಿರುವ ಜಲಾಶಯಗಳ ಪುನರ್ ನಿರ್ಮಾಣಕ್ಕೂ ಅಂಗೀಕಾರ ನೀಡಲಾಗಿದೆ. ಇದಕ್ಕಾಗಿ ಒಂದು ಲಕ್ಷ ರೂ. ರಾಜ್ಯ ಹಾರ್ಟಿಕಲ್ಚರ್ ಮಿಷನ್ ಮೂಲಕ ಮಂಜೂರು ಮಾಡಲಾಗುವುದು ಎಂದು ಕೃಷಿ ಹೆಚ್ಚುವರಿನಿರ್ದೇಶಕ ಜೋನ್ ಜೋಸೆಫ್ ತಿಳಿಸಿರುವರು.
ವಿಶ್ವ ಪರಿಸರ ಸಂರಕ್ಷಣೆ ದಿನವಾಗಿರುವ ಜೂ.5ರಂದು 500 ಬೆತ್ತದ ಸಸಿಗಳನ್ನು ವಿತರಿಸಲಾಗುವುದು. ಜೊತೆಗೆ 100 ರೂ. ಬೆಲೆಯ 70 ಹಲಸಿನ ಸಸಿಗಳನ್ನೂ ಉಚಿತವಾಗಿ ನೀಡಲಾಗುವುದು. ಬೆತ್ತದ ಸಸಿಗಳ ಉತ್ಪಾದನೆ ಕಾಸರಗೋಡು ಬೀಜೋತ್ಪಾದನೆ ಕೇಂದ್ರದಲ್ಲಿ ನಡೆಯುತ್ತಿದೆ. ಇದಲ್ಲದೆ ಕೃಷಿ ವಿಜ್ಞಾನ ವಿಸ್ತರಣೆಗಾಗಿ ಆತ್ಮ ಯೋಜನೆ ಪ್ರಕಾರ ಕೃಷಿ ಜಾಗೃತಿ ತರಬೇತಿಯನ್ನು ನಡೆಸಲಾಗುವುದು. ಬದಿಯಡ್ಕ ಕೃಷಿ ಭವನದ ನೇತೃತ್ದಲ್ಲಿ ಈ ಯೋಜನೆ ಜಾರಿಗೊಳಿಸಲಿದ್ದು, ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯ ಮಹಿಳಾ ಕಾರ್ಮಿಕರ ಸೇವೆಯನ್ನು ಈ ನಿಟ್ಟಿನಲ್ಲಿ ಬಳಸಲಾಗುವುದು.
ಮೂರು ವರ್ಷದಲ್ಲಿ ಕೊಯ್ಲು ನಡೆಸುವ ರೀತಿಯಲ್ಲಿ ಬೆತ್ತದ ಬಳ್ಳಿಗಳನ್ನು, ಮೂರು ವರ್ಷದಲ್ಲಿ ಕೊಯ್ಲು ನಡೆಸುವ ವರ್ಣಸಂಕರ ವಿಭಾಗದ ಹಲಸು ಸಸಿಗಳನ್ನು ಈ ನಿಟ್ಟಿನಲ್ಲಿ ವಿತರಣೆ ನಡೆಸಲಾಗುವುದು. ಬದಿಯಡ್ಕ ಕೃಷಿ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಮಪಂಚಾಯತಿ ಆಡಳಿತ ಸಮಿತಿಯ ಸಂಪೂರ್ಣ ಉಸ್ತುವಾರಿಯಲ್ಲಿ ಯೋಜನೆ ನಿರ್ವಹಣೆ ನಡೆಯಲಿದೆ. ಪರಿಶಿಷ್ಟ ಪಂಗಡದವರ ಬದುಕನ್ನು ಅಭಿವೃದ್ಧಿಗೊಳಿಸುವ, ಅವರ ಬದುಕಿಗೆ ಹೊಸ ಆಯಾಮ ಒದಗಿಸುವ, ಅವರನ್ನು ಕೃಷಿ ಜೀವನದತ್ತ ಮನಮಾಡುವಂತೆ ಜಾಗೃತಗೊಳಿಸುವ ಮೂಲಕ ಸಮಾಜದ ಪ್ರಧಾನವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ.

