HEALTH TIPS

ಕಾಸರಗೋಡಿನಲ್ಲಿ ಕನ್ನಡದ ಉಳಿವಿಗೆ ಹೋರಾಟ ಅಗತ್ಯ- ಪಿ.ಎನ್.ಮೂಡಿತ್ತಾಯ

ಮಂಜೇಶ್ವರ: ಗಿಳಿವಿಂಡು ಕಾಸರಗೋಡಿನಲ್ಲಿ ಕನ್ನಡ ಭಾಷೆ ಇನ್ನು ಉಳಿಯಬೇಕಾದರೆ ಅಲ್ಪ ಮಟ್ಟಿನ ಹೋರಾಟ ಅತೀ ಅಗತ್ಯ. ಕನ್ನಡಿಗರು ಈ ಮಹತ್ವವನ್ನು ಗ್ರಹಿಸದಿದ್ದರೆ ಸರಕಾರದ ಧಮನ ನೀತಿಯಿಂದ ಅದು ಈ ಗಡಿನಾಡಿನಿಂದ ಮರೆಯಾಗುವುದರಲ್ಲಿ ಸಂಶಯವಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ, ತಲಶ್ಚೇರಿ ಬ್ರಿನ್ನಿಯನ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ನಾರಾಯಣ ಮೂಡಿತ್ತಾಯ ಅಭಿಪ್ರಾಯ ಪಟ್ಟರು. ಅವರು ಕೇರಳ ಕನ್ನಡ ಸಾಹಿತ್ಯ ಸಂಗಮ ಮಂಜೇಶ್ವರ ಇದರ ಉದ್ಘಾಟನೆಯನ್ನು ಭಾನುವಾರ ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈಗಳ ಗಿಳಿವಿಂಡುವಿನಲ್ಲಿ ನಿರ್ವಹಿಸಿ ಮಾತನಾಡಿದರು. ಕೇರಳ ಕನ್ನಡ ಸಾಹಿತ್ಯ ಸಂಗಮದ ಹೆಸರಿನಲ್ಲೇ ಕೇರಳದಲ್ಲಿ ಕನ್ನಡದ ಕಂಪು ಭಾಸವಾಗುತ್ತದೆ ಎಂದರು.ಮಂಜೇಶ್ವರದ ಮಣ್ಣಿನಲ್ಲಿ ಕನ್ನಡದ ಉಳಿವು ಬೆಳೆವಿಗೆ ಇದೊಂದು ದಿಟ್ಟ ಹೆಜ್ಜೆಯೆಂದು ಶ್ಲಾಘಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಡಾ. ಅಣ್ಣಯ್ಯ ಕುಲಾಲರು ಸಂಸ್ಥೆಯ ದ್ಯೇಯೋದ್ಧೇಶವನ್ನು ಮೆಚ್ಚಿ ಶುಭಹಾರೈಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ಶಿಕ್ಷಕ ಹ.ಸು.ಒಡ್ಡಂಬೆಟ್ಟು ಅವರು ವಹಿಸಿದ್ದರು. ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ವೈದ್ಯ ಸಾಹಿತಿ ಡಾ.ರಮಾನಂದ ಬನಾರಿ, ಹಿರಿಯ ಸಾಹಿತಿ ಡಾ.ವಸಂತ ಕುಮಾರ್ ಪೆರ್ಲ ಮತ್ತು ವಿಜಯಾ ವಿಷ್ಣು ಡೋಂಗ್ರೆ ಪಾಲ್ಗೊಂಡಿದ್ದರು. ಸಂಸ್ಥೆಯ ಪ್ರಧಾನ ಸಲಹಾಗಾರ ವೀರೇಶ್ವರ ಕರ್ಮರ್ಕರ್ ಸಮನ್ವಯಕಾರರಾಗಿದ್ದರು. ಆ ಬಳಿಕ ನಡೆದ ಕವಿಗೋಷ್ಟಿಯಲ್ಲಿ ಸುಮಾರು ಮೂವತ್ತು ಹೆಸರಾಂತ ಕವಿಗಳು ಸಾಹಿತಿ ವಿ.ಬಿ.ಕುಳಮರ್ವ ಅವರ ಅಧ್ಯಕ್ಷತೆಯಲ್ಲಿ ಕವನ ವಾಚಿಸಿದರು.ಕುಮಾರಿ ಶ್ವೇತಾ ಪೈ ಕಾರ್ಯಕ್ರಮ ನಡೆಸಿಕೊಟ್ಟರು. ಅನಂತೇಶ್ವರ ಮಲ್ಯ ಮತ್ತು ಪ್ರಭಾ ನಾಯಕ್ ಮತ್ತು ಬಳಗದವರಿಂದ ಗೀತಗಾಯನವೂ ನಡೆಯಿತು. ಸಂಘಟನಾ ಕಾರ್ಯದರ್ಶಿ ಗಣೇಶ್ ಪ್ರಸಾದ್ ನಾಯಕ್ ಸ್ವಾಗತಿಸಿ, ಗಣೇಶ್ ಪೈ ಬದಿಯಡ್ಕ ವಂದಿಸಿದರು. ಕಾರ್ಯದರ್ಶಿ ಬಾಲಕೃಷ್ಣ ಮುಜುಕುಮೂಲೆ ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಬಗ್ಗೆ: ಕೇರಳ ಕನ್ನಡ ಸಾಹಿತ್ಯ ಸಂಗಮ ಸಂಸ್ಥೆಯು ರಾಷ್ಟ್ರ ಕವಿ ಗೋವಿಂದ ಪೈ ಅವರ ನೆಲದಲ್ಲೇ ಉಗಮಗೊಂಡು ಇಲ್ಲಿ ಕನ್ನಡದ ಕಂಪನ್ನು ಗಡಿನಾಡಿನುದ್ದಕ್ಕೂ ಪಸರಿಸಿ ಆ ಮೂಲಕ ಕನ್ನಡದ ಉಳಿವಿಗೆ ಮತ್ತು ಬೇಳೆವಿಗೆ ಶ್ರಮಿಸುವ ಉದ್ದೇಶವನ್ನು ಹೊಂದಿದೆ.ಸಮಾನ ಮನಸ್ಕರ ಈ ಸಂಗಮವು ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಕೆಲಸಗಳನ್ನು ನಡೆಸುವ ಯೋಜನೆಗಳನ್ನು ಹಾಕಿಕೊಂಡಿದ್ದು ಮುಂದಿನ ದಿನಗಳಲ್ಲಿ ಈ ಪ್ರದೇಶದ ಶಾಲಾ ಕಾಲೇಜುಗಳನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುವ ಉದಗದೇಶಗಳನ್ನು ಹೊಂದಿದೆ ಮತ್ತು ಕನ್ನಡಾಭಿಮಾನಿಗಳ, ಸಹೃದಯ ಕವಿ ಸಾಹಿತಿಗಳ,ಸಾಹಿತ್ಯ ಆಸಕ್ತರ ,ಸಾಹಿತ್ಯ ಪೋಷಕರ ಬೆಂಬಲವನ್ನು ಸದಾ ನಿರೀಕ್ಷಿಸುತ್ತಿದೆ. ಹರೀಶ್ ಸುಲಾಯ ಒಡ್ಡಂಬೆಟ್ಟು ಅಧ್ಯಕ್ಷರು ಕೇರಳ ಕನ್ನಡ ಸಾಹಿತ್ಯ ಸಂಗಮ ಮಂಜೇಶ್ವರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries