ಬದಿಯಡ್ಕ: ಶ್ರೀಮದ್ ಎಡನೀರು ಮಠದ ಎಡನೀರು ಶ್ರೀವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವ ಬುಧವಾರದಿಂದ ಆರಂಬಗೊಂಡಿತು. ಉತ್ಸವವು ಫೆ.17ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಶ್ರದ್ದಾ ಭಕ್ತಿಯಿಂದ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬುಧವಾರ ಬೆಳಿಗ್ಗೆ 10 ಕ್ಕೆ ಧ್ವಜಾರೋಹಣ ನಡೆಯಿತು. ಬಳಿಕ ಶ್ರೀಭೂತಬಲಿ, ಹಸಿರುವಾಣಿ ಮೆರವಣಿಗೆ, ಉಗ್ರಾಣ ಮುಹೂರ್ತ ನಡೆಯಿತು. ಸಂಜೆ 6 ರಿಂದ ದೀಪೋತ್ಸವ ನಡೆಯಿತು.




ಇಂದಿನ ಕಾರ್ಯಕ್ರಮ:
ಫೆ.14 ರಂದು ಬೆಳಿಗ್ಗೆ 9 ರಿಂದ ಶ್ರೀಭೂತಬಲಿ, ಸಂಜೆ 6ರಿಂದ ದೀಪೋತ್ಸವ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8 ರಿಂದ ವಿದ್ವಾನ್ ಟಿ.ಪಿ.ಶ್ರೀನಿವಾಸ್ ಕಾಂಞÂಂಗಾಡ್ ಹಾಗೂ ಬಳಗದವರಿಂದ ಶಾಸ್ತ್ರೀಯ ಸಂಗೀತ ಕಚೇರಿ ಏರ್ಪಡಿಸಲಾಗಿದೆ.
ಫೆ.15 ರಂದು ಸಂಜೆ 6.30ರಿಂದ ಮುಂಬೈಯ ಶ್ರೀರಾಜರಾಜೇಶ್ವರಿ ಕಲಾ ಮಂಡಳಿಯವರಿಂದ ಕಲೈಮಾಣಿ ಗುರು ಕೆ.ಕಲ್ಯಾಣ ಸುಂದರಂ ಮುಂಬೈ ಅವರ ನೇತೃತ್ವದಲ್ಲಿ ಭರತನಾಟ್ಯ ಪ್ರದರ್ಶನ ನಡೆಯಲಿದೆ.