ಕಾಸರಗೋಡು: ಜಿಲ್ಲಾ ಮಟ್ಟದ ಆರೋಗ್ಯ-ಶಿಕ್ಷಣ ಜಾಗೃತಿ ಕಾರ್ಯಕ್ರಮ ಮಡಿಕೈ ಪ್ರಾಥಮಿಕ ಆರೋಗ್ಯ ಕೇಂದ್ರ ಸಭಾಂಗಣದಲ್ಲಿ ಜರುಗಿತು.
ರಾಷ್ಟ್ರೀಯ ಮಲೇರಿಯ-ಡೆಂಗೆ ಜ್ವರ ವಿರುದ್ಧ ಮಾಸಾಚರಣೆ ಅಂಗವಾಗಿ ಆರೋಗ್ಯ ಇಲಾಖೆ ಮತ್ತು ಮಡಿಕೈ ಗ್ರಾಮಪಂಚಾಯತ್ ವತಿಯಿಂದ ಗುರುವಾರ ಸಮಾರಂಭ ಜರುಗಿದ್ದು, ರ್ಯಾಲಿ, ವಿಚಾರಸಂಕಿರಣ ಇತ್ಯಾದಿಗಳು ನಡೆದುವು.
ಮಡಿಕೈ ಗ್ರಾಮಪಂಚಾಯತ್ ಅಧ್ಯಕ್ಷ ಸಿ.ಪ್ರಭಾಕರನ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಕೆ.ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು. ಜೂನಿಯರ್ ಅಡ್ಮಿನಿಸ್ಟ್ರೇಟಿವ್ ಮೆಡಿಕಲ್ ಆಫೀಸರ್ ಡಾ.ಆರತಿ ರಂಜಿತ್ ಕಾರ್ಯಕ್ರಮದ ಮಾಹಿತಿ ನೀಡಿದರು. ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಕೆ.ಪ್ರಕಾಶ್ ಕುಮಾರ್ ತರಗತಿ ನಡೆಸಿದರು. ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಎಂ.ಅಬ್ದುಲ್ರಹಮಾನ್, ಸಿ.ಇಂದಿರಾ, ಸದಸ್ಯರಾದ ಟಿ.ಸುಶೀಲಾ, ಕೆ.ಎ.ಬಿಜಿ, ಎಂ.ವತ್ಸಲಾ, ಪಿ.ಗೀತಾ,ಕೆ.ಜಗದೀಶ್, ವಿ.ಶಶಿ, ಎ.ದಾಮೋದರನ್, ಜಿಲ್ಲಾಡೆಪ್ಯೂಟಿ ಮಾಸ್ ಮೀಡಿಯಾ ಅಧಿಕಾರಿ ಕೆ.ಅರುಣ್ ಲಾಲ್, ಮೆಡಿಕಲ್ ಆಫೀಸರ್ ಡಾ.ಸೆಲ್ಮಾ ಜೆಸಿ, ಆರೋಗ್ಯ ಕಾರ್ಯಕರ್ತರಾದ ಸೈದ್ ಎಂ.ಮಹಮ್ಮದ್, ಕೆ.ವಿ.ಗಂಗಧರನ್, ಜೋನ್ವರ್ಗೀಸ್, ಎನ್.ಜಿ.ತಂಗಮಣಿ ಮೊದಲಾದವರು ಉಪಸ್ಥಿತರಿದ್ದರು.
ಪುದುಕ್ಕಾಲ್ ಪ್ರದೇಶದಲ್ಲಿ ನಡೆದ ರ್ಯಾಲಿಗೆ ಪಂಚಾಯತ್ ಅಧ್ಯಕ್ಷಸಿ.ಪ್ರಭಾಕರನ್ ಹಸುರು ನಿಶಾನೆ ತೋರಿದರು. ಜಿಲ್ಲಾ ವೆಕ್ಟರ್ ಕಂಟ್ರೋಲ್ ಯೂನಿಟ್ ನೇತೃತ್ವದಲ್ಲಿ ಆರೋಗ್ಯ-ಶಿಕ್ಷಣ ಪ್ರದರ್ಶನಗಳು ನಡೆದುವು.

