HEALTH TIPS

ಉಪ್ಪಳ ರೈಲು ನಿಲ್ದಾಣ ಅಭಿವೃದ್ದಿಗೆ ಸಂಸದರಿಗೆ ಮನವಿ

 
      ಉಪ್ಪಳ: ಇತ್ತೀಚೆಗೆ ಉಪ್ಪಳರೈಲು ನಿಲ್ದಾಣಕ್ಕೆ ಅವಲೋಕನ ನಡೆಸಲು ಆಗಮಿಸಿದ ಸಂಸದ ರಾಜಮೋಹನ ಉಣ್ಣಿತ್ತಾನ್ ಅವರಿಗೆ ಸೇವ್ ಉಪ್ಪಳರೈಲು ನಿಲ್ದಾಣ ಕ್ರಿಯಾ ಸಕಿತಿ ಸದಸ್ಯರು ಮನವಿ ಸಲ್ಲಿಸಿ ರೈಲು ನಿಲ್ದಾಣವನ್ನು ಅಭಿವೃದ್ದಿಗೊಳಿಸಲು ಆಗ್ರಹಿಸಿದರು.
   ಉಪ್ಪಳರೈಲು ನಿಲ್ದಾಣದಲ್ಲಿ ನೇತ್ರಾವತಿ ಎಕ್ಸ್‍ಪ್ರೆಸ್,ಮಾವೇಲಿ ಎಕ್ಸ್‍ಪ್ರೆಸ್ ರೈಲುಗಾಡಿಗಳಿಗೆ ಉಪ್ಪಳರೈಲು ನಿಲ್ದಾಣದಲ್ಲಿ ನಿಲುಗಡೆಗೆ ಆಸ್ಪದ ನೀಡಬೇಕು, ಉಪ್ಪಳಹಾಗೂ ಮಾಣಿಹಿತ್ತಲು ಎಂಬಲ್ಲಿ ರೈಲ್ವೇ ಸೇತುವೆ ನಿರ್ಮಿಸಬೇಕು, ಉಪ್ಪಳರೈಲು ನಿಲ್ದಾಣವನ್ನು ಉನ್ನತೀಕರಿಸಿ ಟಿಕೆಟ್ ಕಾಯ್ದಿರಿಸುವಿಕೆ ಸೌಕರ್ಯವನ್ನು ಅಳವಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸಮಸದರಿಗೆ ಸಲ್ಲಿಸಲಾಯಿತು.
     ಸೇವ್ ಉಪ್ಪಳ ರೈಲು ನಿಲ್ದಾಣ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ವಾನಂದೆ, ಮೊಹಮ್ಮದ್ ಅಝೀಂ ಮಣಿಮುಂಡ, ಶಾಹುಲ್ ಹಮೀದ್ ಬಂದ್ಯೋಡು, ಟಿ.ಎ.ಮೂಸಾ, ಎಂ.ಕೆ.ಅಲಿ ಮಾಸ್ತರ್, ಸತ್ಯನ್ ಸಿ.ಉಪ್ಪಳ, ನಾಫಿ ಬಪ್ಪಾಯಿತೊಟ್ಟಿ, ಕುಂಞÂಕೃಷ್ಣನ್, ಮಕ್ಬೂಲ್ ಅಹಮ್ಮದ್, ಉಮರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
     ನೆಹರೂ ಯುವಕೇಂದ್ರ ಹಾಗೂ ಬ್ರದರ್ಸ್ ಮಣಿಮುಂಡ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಸ್ವಚ್ಚ ಭಾರತ್ ಶುಚೀಕರಣ ಯಜ್ಞದ ಅಂಗವಾಗಿ ಆಯೋಜಿಸಲಾದ ಸ್ವಚ್ಚ ನಾಡಿಗಾಗಿ ಮ್ಯಾರಥಾನ್ ಓಟವನ್ನು ಈ ಸಂದರ್ಭ ಸಂಸದರು ಉದ್ಘಾಟಿಸಿ ಚಾಲನೆ ನೀಡಿದರು. ರೇಸ್ ಇನ್ಸ್ಟಿಟ್ಯೋಟ್ ಉಪ್ಪಳ ಸಂಘಟನೆಯ ವಿದ್ಯಾರ್ಥಿಗಳು ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries