ಕಾಸರಗೋಡು: ಕೇರಳ ಪಬ್ಲಿಕ್ ಸರ್ವೀಸ್ ಕಮೀಶನ್ ಕಾಸರಗೋಡು ಜಿಲ್ಲೆಯ ವಿವಿಧ ಸರಕಾರಿ ಇಲಾಖೆಗಳಲ್ಲಿ ಕನ್ನಡ ಹಿತರಕ್ಷಣೆಗಾಗಿ ಸೃಷ್ಟಿಸಿದ ಕನ್ನಡ ಬಲ್ಲ ಎಲ್.ಡಿ.ಕ್ಲರ್ಕ್ (ಕೇಟಗರಿ ನಂ.459/17 ಮತ್ತು 460/17) ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಒ.ಎಂ.ಆರ್. ಪರೀಕ್ಷೆಯನ್ನು ಅಕ್ಟೋಬರ್ 22 ರಂದು ನಡೆಸಲು ನಿರ್ಧರಿಸಿದೆ. ಈ ಬಗ್ಗೆ ಹಾಲ್ ಟಿಕೇಟು ಪಡೆಯಲು ದೃಢೀಕರಿಸುವ ಕೊನೆಯ ದಿನಾಂಕ 11-8-2019 ಆಗಿದೆ.
ಈಗಾಗಲೇ ಖಚಿತ ಪಡಿಸಿದವರು ಮತ್ತು ಖಚಿತ ಪಡಿಸಲು ಬಾಕಿ ಇರುವ ಕಾಸರಗೋಡಿನ ಕನ್ನಡ ಉದ್ಯೋಗಾರ್ಥಿಗಳಿಗಾಗಿ ವಿಶೇಷ ಮಾಹಿತಿ ಶಿಬಿರವನ್ನು ಮತ್ತು ಕೋಚಿಂಗ್ ತರಗತಿಗಳನ್ನು ಆಗೋಸ್ತು 4 ರಂದು ಬೆಳಗ್ಗೆ 10 ಗಂಟೆಗೆ ಕುಂಬಳೆ ಸಿಂಡಿಕೇಟ್ ಬ್ಯಾಂಕ್ ಬಳಿಯಿರುವ ಮಾಧವ ಪೈ ಸಭಾಭವನದಲ್ಲಿ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಸಲು ನಿಶ್ಚಯಿಸಲಾಗಿದೆ.
ಕಳೆದ ಒಂದು ವರ್ಷಗಳಿಂದ ಈ ಪರೀಕ್ಷೆಯನ್ನು ಕೂಡಲೇ ನಡೆಸುವಂತೆ ಕನ್ನಡ ಹೋರಾಟ ಸಮಿತಿ ಮತ್ತು ಇತರ ಕನ್ನಡ ಸಂಘಟನೆಗಳು ಕೇರಳ ಪಿಎಸ್‍ಸಿಯನ್ನು ಒತ್ತಾಯಿಸುತ್ತಾ ಬಂದಿರುವುದನ್ನು ನೆನಪಿಸಬಹುದು. ಕಾಸರಗೋಡಿನ ಕನ್ನಡ ಉದ್ಯೋಗಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕಾಸರಗೋಡು ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

