ಬಾಯಾರು ಬಿಎಂಎಸ್ ವತಿಯಿಂದ ಸ್ಥಾಪನಾ ದಿನಾಚರಣೆ
ಉಪ್ಪಳ: ಭಾರತೀಯ ಮಜ್ದೂರ್ ಸಂಘದ ಸ್ಥಾಪನಾ ದಿನವನ್ನು ಪೈವಳಿಕೆ ಪಂಚಾಯತಿ ಬಾಯಾರು ಘಟಕದ ಕ್ಯಾಂಪೆÇ್ಕೀ ಕಾರ್ಮಿಕರು ಮಂಗಳವಾರ ಆಚರಿಸಿದರು.
ಧ್ವಜಾರೋಹಣವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಜೇಶ್ವರ ತಾಲೂಕು ಬಾಲಗೋಕುಲ ಸಂಚಾಲಕ್ ಚಂದ್ರಹಾಸ ಅವರು ನಡೆಸಿದರು. ಬಿಎಂಎಸ್ ನ ಪೈವಳಿಕೆ ಪಂಚಾಯತಿ ಅಧ್ಯಕ್ಷ ನಾರಾಯಣ ಕಳಂದೂರು, ಭಾಜಪ ಪೈವಳಿಕೆ ಪಂಚಾಯತಿ ಅಧ್ಯಕ್ಷ ಸದಾಶಿವ ಚೇರಾಲು, ಬಿಎಂಎಸ್ ನ ಪೈವಳಿಕೆ ಪಂಚಾಯತಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
(ಚಿತ್ರ ಸುದ್ದಿ; ಬಾಯಾರಿನಲ್ಲಿ ಮಂಗಳವಾರ ನಡೆದ ಬಿಎಂಎಸ್ ಸ್ಥಾಪನಾ ದಿನಾಚರಣೆಯಲ್ಲಿ ಧ್ವಜಾರೋಹಣವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಜೇಶ್ವರ ತಾಲೂಕು ಬಾಲಗೋಕುಲ ಸಂಚಾಲಕ್ ಚಂದ್ರಹಾಸ ಅವರು ನಿರ್ವಹಿಸುತ್ತಿರುವುದು.)
...................................................................................................................................................................................................
ಮಾನ್ಯದಲ್ಲಿ ಸ್ಥಾಪನಾ ದಿನಾಚರಣೆ
ಬದಿಯಡ್ಕ: ಬಿಎಂಎಸ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಮಂಗಳವಾರ ಮಾನ್ಯ ಘಟಕದ ವತಿಯಿಂದ ನಡೆದ ದ್ವಜಾರೋಹಣವನ್ನು ಜಿಲ್ಲಾ ಜೊತೆ ಕಾರ್ಯದರ್ಶಿ ಪಿ. ದಿನೇಶ್ ನೆರವೇರಿಸಿದರು.
...............................................................................................
ನಾಯ್ಕಾಪಿನಲ್ಲಿ ದಿನಾಚರಣೆ
ಕುಂಬಳೆ: ಬಿ.ಎಂ.ಎಸ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ನಾಯ್ಕಾಪು ಶಾಸ್ತಾ ಅಟೋ ನಿಲ್ದಾಣದಲ್ಲಿ ಮಂಗಳವಾರ ಧ್ವಜ ದಿನವನ್ನು ಆಚರಿಸಲಾಯಿತು. ಘಟಕದ ಅಧ್ಯಕ್ಷ ಆನಂದ ಧ್ವಜಾರೋಹಣಗೈದರು. ಬ್ಲಾಕ್ ಪಂ.ಸದಸ್ಯ ಸತ್ಯಶಂಕರ ಭಟ್, ಗ್ರಾಮ ಪಂಚಾಯತಿ ಸದಸ್ಯ ಮುರಳೀಧರ ಯಾದವ್ ಮತ್ತು ಬಿ.ಎಂ.ಎಸ್.ಜಿಲ್ಲಾ ಜೊತೆ ಕಾರ್ಯದರ್ಶಿ ಐತ್ತಪ್ಪ. ಎನ್ ಶುಭಾಶಂಸನೆಗೈದರು. ಭಾಸ್ಕರ.ಎನ್ ಸ್ವಾಗತಿಸಿ, ವೇಣುಗೋಪಾಲ ಅನಂತಪುರ ವಂದಿಸಿದರು. ಇದೇ ಸಂದರ್ಭದಲ್ಲಿ ರಿಕ್ಷಾ ಚಾಲಕ ಆನಂದ ಮುಳಿಯಡ್ಕ ಅವರಿಗೆ ಘಟಕದ ವತಿಯಿಂದ ಚಿಕಿತ್ಸಾ ಸಹಾಯ ಧನವನ್ನು ಸತ್ಯಶಂಕರ ಭಟ್ ಹಸ್ತಾಂತರಿಸಿದರು.
(ಚಿತ್ರ ಮಾಹಿತಿ-ಬಿಎಂಎಸ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ನಾಯ್ಕಾಪು ಘಟಕದಲ್ಲಿ ನಡೆದ ಧ್ವಜಾರೋಹಣ,4)ಆನಂದ ಮುಳಿಯಡ್ಕ ಅವರಿಗೆ ಚಿಕಿತ್ಸಾ ಸಹಾಯ ಧನ ವಿತರಿಸುತ್ತಿರುವುದು.)




