ಪೆರ್ಲ:ಪೆರ್ಲದ ವಿವಿಧ ಭಾಗಗಳಲ್ಲಿ ಆ.23ರಂದು ಶ್ರೀಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ನಡೆಯಲಿದೆ.
ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಳ:
ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ), ವಿಷ್ಣುಮೂರ್ತಿ ದೇವಳ ಪರಿಸರದಲ್ಲಿ ಶ್ರೀ ವಿಷ್ಣುಮೂರ್ತಿ ಯುವಕ ಸಂಘ, ಶ್ರೀ ಉಳ್ಳಾಲ್ತಿ ಮಹಿಳಾ ಸಂಘ ಆಶ್ರಯದಲ್ಲಿ ಆ.23ರಂದು ಬೆಳಗ್ಗೆ 10ರಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪುರುಷರಿಗೆ ಮೊಸರು ಕುಡಿಕೆ, ಹಗ್ಗಜಗ್ಗಾಟ, ಮಡಕೆ ಒಡೆಯುವುದು, ಮಹಿಳೆಯರಿಗೆ ಹಗ್ಗಜಗ್ಗಾಟ, ಮಡಕೆ ಒಡೆಯುವುದು, ಸಂಗೀತಕುರ್ಚಿ, ಲಿಂಬೆ ಚಮಚ ಓಟ, ಸೂಜಿ ನೂಲು ಓಟ, ಹೂಮಾಲೆ ಸ್ಪರ್ಧೆ, 6ವರ್ಷದ ಕೆಳಗಿನ ಮಕ್ಕಳಿಗೆ ಶ್ರೀಕೃಷ್ಣ ವೇಷ, 7ನೇ ತರಗತಿ ವರೆಗಿನ ಮಕ್ಕಳಿಗೆ ಸಂಗೀತ ಕುರ್ಚಿ, ಬಟಾಟೆ ಹೆಕ್ಕುವ ಸ್ಪರ್ಧೆ, 10ನೇ ತರಗತಿ ವರೆಗಿನ ಮಕ್ಕಳಿಗೆ ರಸಪ್ರಶ್ನೆ ಇನ್ನಿತರ ಸ್ಪರ್ಧೆಗಳು ನಡೆಯಲಿವೆ.
ಸಂಜೆ 5ರಿಂದ ಪೆರ್ಲ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಸಬ್ಬಣಕೋಡಿ ರಾಮಭಟ್ ನಿರ್ದೇಶನದಲ್ಲಿ 'ಶ್ರೀಕೃಷ್ಣಾನುಗ್ರಹ' ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.

