ಕಾಸರಗೋಡು: ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ನೇತೃತ್ವದಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು, ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಸಹಯೋಗದಲ್ಲಿ ಶ್ರೀ ರಾಮನಾಥ ಬಾಲಗೋಕುಲದ 17 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಹಾಗು ಎಂಟನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಶ್ರೀ ಕೃಷ್ಣ ವೇಷ ಸ್ಪರ್ಧೆ ಆ.23 ರಂದು ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಡಾ.ಉದಯ ಕಾಸರಗೋಡು ಮತ್ತು ಬಳಗದಿಂದ ಸ್ಯಾಕ್ಸೋಫೆÇೀನ್ ವಾದನ, 10 ರಿಂದ ನಡೆಯುವ ಸಭಾ ಕಾರ್ಯಕ್ರಮವನ್ನು ಧಾರ್ಮಿಕ, ಸಾಮಾಜಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಅವರು ಉದ್ಘಾಟಿಸುವರು. ಬಿಜೆಪಿ ಕೇರಳ ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾೈಕ್ ಅತಿಥಿಯಾಗಿ ಭಾಗವಹಿಸುವರು. ಸಾಹಿತಿ, ಉದ್ಯಮಿ ರಂಗ ಶರ್ಮ ಉಪ್ಪಂಗಳ ಶುಭಹಾರೈಸುವರು. ಕರಾವಳಿ ಸಾಂಸ್ಕøತಿಕ ಭವನ ಸಮಿತಿ ಅಧ್ಯಕ್ಷ ಶಿವರಾಮ ಕಾಸರಗೋಡು, ದಿವಾಕರ ಅಶೋಕನಗರ, ಸಂಚಾಲಕ ಕೆ.ಗುರುಪ್ರಸಾದ್ ಕೋಟೆಕಣಿ ಮೊದಲಾದವರು ಉಪಸ್ಥಿತರಿರುವರು.
ಬಳಿಕ ಕಂದ ಕೃಷ್ಣ, ಬಾಲಕೃಷ್ಣ, ಮುದ್ದು ಕೃಷ್ಣ, ಶ್ರೀಕೃಷ್ಣ ಮತ್ತು ದೇವಕಿ ಕೃಷ್ಣ-ಯಶೋದ ಕೃಷ್ಣ-ವಸುದೇವ ಕೃಷ್ಣ-ರಾಧಾಕೃಷ್ಣ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ವೇಷ ಸ್ಪರ್ಧೆಯ ಬಳಿಕ ಮೊಸರು ಕುಡಿಕೆ ಸ್ಪರ್ಧೆಯೂ ನಡೆಯಲಿದೆ.


