ಕಾಸರಗೋಡು: ಜಿಲ್ಲೆಯ ಅತಿವೃಷ್ಠಿ ಯಿಂದ ನಲುಗಿರುವ ಜನರನ್ನು ಪುನರ ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಿರುವಂತೆ ಪುನರ್ ವಸತಿ ಕೇಂದ್ರಗಳ ನತದೃಷ್ಟರಿಗೆ ನೆರವಾಗಲು ವಿವಿಧೆಡೆಗಳಿಂದ ನೆರವಿನ ಹಸ್ತಗಳು ತೆರೆದುಕೊಂಡಿವೆ.
ಭಾನುವಾರ ಹೊಸದುರ್ಗ ತಾಲೂಕು ಕಾರ್ಯಾಲಯದ ಪುನರ್ ವಸತಿ ಘಟಕ ಮತ್ತು ಪಡನ್ನಕ್ಕಾಡ್ ಕೃಷಿ ವಿವಿ ಆವರಣದ ಘಟಕಗಳಿಗೆ ಬಟ್ಟೆ ಬರೆ ಸಹಿತ ವಿವಿಧ ನಿತ್ಯೋಪಯೋಗಿ ವಸ್ತುಗಳನ್ನು ಹಸ್ತಾಂತರಿಸಲಾಗಿದೆ. ಜಿಲ್ಲೆಯ ವಿವಿಧೆಡೆಗಳ ಸಂಘಸಂಸ್ಥೆಗಳು, ವ್ಯಕ್ತಿಗಳು ಪ್ರಾಥಮಿಕ ಆವಶ್ಯಕತೆಗಳಿಗೆ ಈ ವಸ್ತುಗಳನ್ನು ನೀಡಿದ್ದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಲಾಯಿತು.
ಅಕ್ಕಿ, ಚಾಹುಡಿ, ಹಾಲುಹುಡಿ, ಅಗತ್ಯ ಬಟ್ಟೆಗಳು, ತುರ್ತು ಔಷಧಿಗಳೇ ಮೊದಲಾದ ವಸ್ತುಗಳು ಈ ಪೈಕಿ ಸೇರಿವೆ.


