ಮುಳ್ಳೇರಿಯ: ಬೆಳ್ಳೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಲಾಂಛನವನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ, 73 ವರ್ಷಗಳ ಹಿಂದೆ 1947 ಆಗಸ್ಟ್ 15ರಂದು ದಿ.ಶಂಕರ ಕಡಂಬಳಿತ್ತಾಯ ಅವರ ಸ್ಮರಣಾರ್ಥ ಓಲೆಸರಿ ಶಂಕರನಾರಾಯಣ ಕಡಂಬಳಿತ್ತಾಯರು ಬೆಳ್ಳೂರು ವಿದ್ಯಾಸಂಸ್ಥೆಯ ಲೋಕಾರ್ಪಣೆ ನಡೆಸಿದ್ದು, ಆ ಸವಿ ನೆನಪಿಗೆ ಲಾಂಛನ ನಿರ್ಮಿಸಲಾಗಿದೆ ಎಂದು ತಿಳಿಸಿದರು. ಪ್ರಾಂಶುಪಾಲ ಶ್ರೀಕೃಷ್ಣ ಭಟ್, ರಕ್ಷಕ ಶಿಕ್ಷಕ ಸಂಘ ಉಪಾಧ್ಯಕ್ಷ ಎನ್.ಎಚ್. ಇಬ್ರಾಹಿಂ, ಸದಸ್ಯ ಹಮೀದ್, ಶಾಲಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಶಶಿಧರ ಗೋಳಿಕಟ್ಟೆ, ಮಾತೃ ಮಂಡಳಿ ಅಧ್ಯಕ್ಷೆ ಶಾಂತಕುಮಾರಿ, ಅಧ್ಯಾಪಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಳ್ಳೂರು ಶಾಲೆ ಲಾಂಛನ ಬಿಡುಗಡೆ
0
ಆಗಸ್ಟ್ 19, 2019