ಕಾಸರಗೋಡು: ವಿಶ್ವಕ್ಕೆ ಭ್ರಾತೃತ್ವವನ್ನು ಸಾರಿದ ಭಾರತವು ಸಾಹೋದರ್ಯ ಸಂಕೇತವಾದ ರಕ್ಷಾ ಬಂಧನದ ಕೊಡುಗೆಯನ್ನೂ ನೀಡಿದೆ. ಪರಸ್ಪರ ಸ್ನೇಹ, ಶಾಂತಿ, ಸೌಹಾರ್ದತೆಯೊಂದಿಗೆ ರಕ್ಷಣೆಯನ್ನೂ ನೀಡುತ್ತದೆ ರಕ್ಷಾಬಂಧನ ಎಂದು ಬ್ರಹ್ಮಕುಮಾರಿ ವಿನೋದ ಅವರು ಅಭಿಪ್ರಾಯಪಟ್ಟರು.
ಅವರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆಯ ನೇತೃತ್ವದಲ್ಲಿ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಜರಗಿದ ರಕ್ಷಾ ಬಂಧನ ಉತ್ಸವದ ಸಂದರ್ಭದಲ್ಲಿ ಮಾತನಾಡಿದರು. ಶಾಲಾ ಮುಖ್ಯೋಪಧ್ಯಾಯರಾದ ಶ್ರೀಹರಿ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಾಲಾ ವ್ಯವಸ್ಥಾಪಕರ ಪರವಾಗಿ ಎಸ್.ಎನ್.ಶಾನುಭೋಗ್, ಬ್ರಹ್ಮಕುಮಾರಿ ಮಂಗಳ, ಬ್ರಹ್ಮಕುಮಾರಿ ರೇಷ್ಮ ಉಪಸ್ಥಿತರಿದ್ದರು. ಶಾಲೆಯ ಅಧ್ಯಾಪಕ ಅಧ್ಯಾಪಿಕೆಯರಿಗೂ ರಾಖಿಯನ್ನು ಕಟ್ಟಿ ಸಿಹಿ ತಿಂಡಿ ವಿತರಿಸಿದರು. ಅಧ್ಯಾಪಕ ಕಿರಣ್ ಪ್ರಸಾದ್ ಕೂಡ್ಲು ಸ್ವಾಗತಿಸಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ನರಸಿಂಹ ಮಯ್ಯ ವಂದಿಸಿದರು.


