ಕುಂಬಳೆ: ಬೇಳ ಪಬ್ಲಿಕ್ ವೆಲ್ಪೇರ್ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕುಂಬಳೆಯಲ್ಲಿರುವ ಬ್ಯಾಂಕಿನ ಪ್ರಧಾನ ಕಾರ್ಯಾಲಯದಲ್ಲಿ ನಡೆಯಿತು.
ಸಹಕಾರಿ ಬ್ಯಾಂಕ್ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಕೆಥೋಲಿಕ್ ಧರ್ಮಪ್ರಾಂತ್ಯದ ಪ್ರಧಾನ ಧರ್ಮಗುರು, ಬೇಳ ಶೋಕಮಾತಾ ದೇವಾಲಯದ ಧರ್ಮಗುರುಗಳೂ ಆದ ಸ್ವಾಮಿ ಜೋನ್ ವಾಸ್ ಹಾಗೂ ಫಾದರ್ ಅನಿಲ್ ಪ್ರಕಾಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ನಿರ್ದೇಶಕಿ ಜೀನ್ ಲವೀನ ವರದಿ ವಾಚಿಸಿದರು. ರಿಚರ್ಡ್ ಕ್ರಾಸ್ತಾ ಅವರು ಆಯ-ವ್ಯಯ ಮಂಡಿಸಿದರು. ಕಾರ್ಯದರ್ಶಿ ಸೋನಿಯಾ ಜಾಸ್ಮಿನ್ ಅವರು ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಹಿರಿಯ ಸಾಹಿತಿ ಸ್ಟಾನಿ ಕ್ರಾಸ್ತಾ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ನಿರ್ಮಿತ್ತಿ ನಿರ್ಮೋಣಿ ಕೊಂಕಣಿ ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಹೆನ್ರಿ ಡಿ.ಸಿಲ್ವ ಮತ್ತು ವೆಂಲ್ಡಿನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭಹಾರೈಸಿದರು. ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರಾಜು ಸ್ಟೀಪನ್ ಸ್ವಾಗತಿಸಿ, ರಾಜು ಮಣಿಯಂಪಾರೆ ವಂದಿಸಿದರು. ಪಿಯದ್ ಹಾಗೂ ಸೌಮ್ಯಾ ಪ್ರಾರ್ಥಿಸಿದರು.


