ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ ಜನ್ಮದಿನೋತ್ಸವ ನಾಳೆ(ಸೆ.26 ಗುರುವಾರ) ವಿವಿಧ ಕಾರ್ಯಕ್ರಮಗಳೊಂದಿಗೆ ಶ್ರೀಮಠದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ರಿಂದ 9ರ ವರೆಗೆ ಶ್ರೀದೇವರಿಗೆ ವಿಶೇಷ ಅಭಿಷೇಕ, ಮಹಾಪೂಜೆ, 12 ರಿಂದ ವಿಶೇಷ ಹವನದ ಪೂರ್ಣಾಹುತಿ. ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 7.30 ರಿಂದ ಮಹಾಪೂಜೆ, ಭಜನಾ ಸಂಕೀರ್ತನೆ, ಗುರುವಂದನೆ ನಡೆಯಲಿದೆ. ರಾತ್ರಿ 8.30 ರಿಂದ ಸಂಗೀತ ಕಚೇರಿ ನಡೆಯಲಿದ್ದು, ವಿದುಶಿಃ ಸುಜಯ್ ಕೃಷ್ಣಮೂರ್ತಿ ಚೆನ್ನೈ ಹಾಡುಗಾರಿಕೆ ನಡೆಸುವರು. ವಿದ್ವಾನ್ ವೇಣುಗೋಪಾಲ ಶಾನುಭೋಗ್ ಮಂಗಳೂರು(ವಯಲಿನ್), ವಿದ್ವಾನ್ ಅನೂರು ದತ್ತಾತ್ರೇಯ ಶರ್ಮಾ(ಮೃದಂಗ), ವಿದ್ವಾನ್ ಜಗದೀಶ ಕುರ್ತಕೋಟಿ(ತಬ್ಲಾ)ದಲ್ಲಿ ಸಾಥ್ ನೀಡುವರು.


