ಬದಿಯಡ್ಕ: ಬೆಂಗಳೂರಿನ ಪ್ರಖ್ಯಾತ ಭರತನಾಟ್ಯ ಕಲಾವಿದ ಸತ್ಯನಾರಾಯಣ ರಾಜು ಅವರು ನಡೆಸಿಕೊಡುತ್ತಿರುವ 4 ದಿನಗಳ ಭರತನಾಟ್ಯ ತರಬೇತಿ ಕಾರ್ಯಾಗಾರಕ್ಕೆ ಬದಿಯಡ್ಕ ಶ್ರೀರಾಮಲೀಲಾ ಸಭಾಂಗಣದಲ್ಲಿ ಗುರುವಾರ ಚಾಲನೆಯನ್ನು ನೀಡಲಾಯಿತು.
ಯಕ್ಷಗಾನ ಅರ್ಥಧಾರಿ, ಸಂಘಟಕ ಕರಿಂಬಿಲ ಲಕ್ಷ್ಮಣ ಪ್ರಭು ದೀಪಜ್ವಲನೆಗೈದರು. ಶಿಬಿರದ ನೇತೃತ್ವವನ್ನು ವಹಿಸಿದ ಬದಿಯಡ್ಕ ಪದ್ಮಶ್ರೀ ಟ್ಯುಟೋರಿಯಲ್ಸ್‍ನ ಪದ್ಮರಾಜ ಪಟ್ಟಾಜೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅಕ್ಷತಾ ಕುಂಜಾರು ಪ್ರಾರ್ಥಿಸಿದರು. ಅಶ್ವಿನಿ ರಾಜ್ ಸ್ವಾಗತಿಸಿ, ವಿನೋದ್ ರಾಜ್ ವಂದಿಸಿದರು. ಪ್ರತೀದಿನ ಅಪರಾಹ್ನ 2ರಿಂದ 6ರ ತನಕ ಭರತನಾಟ್ಯ ತರಬೇತಿ ಕಾರ್ಯಾಗಾರವು ನಡೆಯುತ್ತಿದ್ದು, ಇಂದು(ಸೆ.15)ಸಮಾಪ್ತಿಯಾಗಲಿದೆ.